ಆನಂದ ಮಹೀಂದ್ರಾ ಅವರನ್ನೂ ತಾಕಿತು ಅಂಕೋಲದ ಹಣ್ಣು ಮಾರುವವಳ ಈ ಕಾರ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಆನಂದ್‌ ಮಹೀಂದ್ರಾ ಸದಾ ಒಂದಿಲ್ಲೊಂದು ಆಕರ್ಷಕ, ಉತ್ತಮ ಸಂದೇಶ ನೀಡುವ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಾರೆ. ಇದೀಗ ನಮ್ಮ ರಾಜ್ಯದ ಅಂಕೋಲಾ ಬಸ್ ನಿಲ್ದಾಣದಲ್ಲಿ ಹಣ್ಣು ಮಾರುವ ಒಬ್ಬ ಹೆಣ್ಣುಮಗಳ ಕಾರ್ಯವನ್ನು ಪೋಸ್ಟ್‌ ಮಾಡಿ ಶ್ಲಾಘಿಸಿದ್ದಾರೆ.

`ಈಕೆ ಅಂಕೋಲಾ ಬಸ್‌ ನಿಲ್ದಾಣದಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದು, ಎಲೆಗಳಲ್ಲಿ ಸುತ್ತಿ ಹಣ್ಣನ್ನು ನೀಡುತ್ತಾರೆ. ಈ ವೇಳೆ ಕೆಲವರು ಹಣ್ಣು ತಿಂದ ಬಳಿಕ ಬಸ್‌ನ ಕಿಟಕಿಯಿಂದಲೋ ಅಥವಾ ದೂರದಲ್ಲೆಲ್ಲೋ ಎಲೆಯನ್ನು ಬಿಸಾಡಿ ಹೋಗಿದ್ದಾರೆ. ಆದರೆ ಈ ಮಹಿಳೆ ಸುಮ್ಮನಾಗದೆ ಅಲ್ಲಿಗೆ ಹೋಗಿ ಎಲೆಗಳನ್ನು ತೆಗೆದುಕೊಂಡು ಬಂದು ಕಸದ ಬುಟ್ಟಿಗೆ ಹಾಕುತ್ತಾಳೆ. ಇದು ಅವಳ ಕೆಲಸವಲ್ಲ ಆದರೂ ಆಕೆ ಈ ಕೆಲಸವನ್ನು ಮುಂದುವರಿಸಿದ್ದಾರೆ’ ಆದರ್ಶ್‌ ಹೆಗಡೆ ಟ್ವೀಟ್‌ ಮಾಡಿದ್ದಾರೆ.

ಆದರ್ಶ್‌ ಹೆಗಡೆ ಟ್ವಿಟ್ಟರ್‌ ಉಲ್ಲೇಖಿಸಿದ ಆನಂದ್‌ ಮಹೀಂದ್ರಾ ಈಕೆಯ ಕಾರ್ಯವನ್ನು ಮೆಚ್ಚಿದ್ದಾರೆ. ʻಇವರು ಸದ್ದಿಲ್ಲದೆ ಸ್ವಚ್ಛ ಭಾರತ್ ಮಾಡುವ ನಿಜವಾದ ಹೀರೋಗಳು. ಆಕೆಯ ಪ್ರಯತ್ನಗಳು ಎಲ್ಲರ ಗಮನಕ್ಕೆ ಬಂದು ಮೆಚ್ಚುಗೆ ಪಡೆಯುವಂತಾಗಬೇಕು. ಸ್ಥಳೀಯರ ಸಹಾಯದಿಂದ ಹೆಣ್ಣುಮಗಳ ಸಂಪರ್ಕ ಸಾಧಿಸಬಹುದಾ?ʼ ಎಂದು ಹೆಗಡೆಯವರಲ್ಲಿ ಮಹೀಂದ್ರಾ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!