ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಟ್ಟಿನಿಂದ ವೃದ್ಧಾಪ್ಯದವರೆಗೆ, ಮಾನವನ ಬೆಳವಣಿಗೆಯಲ್ಲಿ ಅನೇಕ ದೈಹಿಕ ಬದಲಾವಣೆಗಳು ಸಂಭವಿಸುತ್ತವೆ. 5 ವರ್ಷದ ಮಹಿಳೆಯಿಂದ 95 ವರ್ಷ ವಯಸ್ಸಿನ ಮಹಿಳೆಯಾಗಿ ರೂಪಾಂತರಗೊಳ್ಳುವುದನ್ನು ತೋರಿಸುವ ವೀಡಿಯೊ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಎಐ-ರಚಿಸಿದ ವೀಡಿಯೊವನ್ನು ಪ್ರಮುಖ ಉದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದಾರೆ.
ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ವೀಡಿಯೋ ಈಗ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತಿದೆ. 5 ವರ್ಷದಿಂದ 95 ವರ್ಷದವರೆಗೆ ಮಹಿಳೆ ಹೇಗಿರುತ್ತಾಳೆ ಎಂಬುದನ್ನು ತೋರಿಸುವ ಸುಂದರ ವಿಡಿಯೋವನ್ನು ರಚಿಸಲಾಗಿದೆ. ಎಐ-ರಚಿಸಿದ ವಿಡಿಯೋ ಉದ್ಯಮಿ ಆನಂದ್ ಮಹೀಂದ್ರ ಅವರ ಕಣ್ಣಿಗೆ ಬಿದ್ದಿದೆ. ‘AI ಭರ್ಜರಿ ವೀಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ‘ನಿಜವಾಗಿಯೂ ಸುಂದರ ಮನುಷ್ಯರನ್ನು ಸೃಷ್ಟಿಸಲು ಸಾಧ್ಯವಾದರೆ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ‘ಹಾಂಟಿಂಗ್ಲಿ ಬ್ಯೂಟಿಫುಲ್’ ಎಂದು ಕೂಡ ಹೊಗಳಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.
ಎಐ ಸೃಷ್ಟಿ ಅದ್ಭುತವಾಗಿದ್ದು, ವಯಸ್ಸಾದರೂ ಕಣ್ಣುಗಳಲ್ಲಿ ಯಾವುದೇ ಬದಲಾವಣೆ ಇಲ್ಲ.. ಇಡೀ ಬದುಕು ಒಂದೇ ಚೌಕಟ್ಟಿನಲ್ಲಿ ಕಾಣುತ್ತಿದೆ ಎಂದು ನಾನಾ ಅಭಿಪ್ರಾಯಗಳು ವ್ಯಕ್ತವಾದವು. ಸದ್ಯ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
Received this post of a sequence of portraits generated by Artificial Intelligence showing a girl ageing from 5years to 95 years. I won’t fear the power of AI so much if it can create something so hauntingly beautiful….and Human… pic.twitter.com/k7d2qupJ52
— anand mahindra (@anandmahindra) April 24, 2023