ಈಗ ಹಳ್ಳಿ ಸುತ್ತೋಕೆ ಹೊರಟಿದ್ದಾರೆ ಆನಂದ್‌ ಮಹೀಂದ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರು ಕಲರ್ಸ್ ಆಫ್ ಭಾರತ್ (Colours of Bharat) ಎಂಬ ಟ್ವಿಟರ್ ಪೇಜ್‌ನ​​ ಪೋಸ್ಟ್ ಅನ್ನು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್‌ನಲ್ಲಿ ಭಾರತದ 10 ಅತ್ಯಂತ ಸುಂದರವಾದ ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ.

ಹಿಮಾಚಲ ಪ್ರದೇಶದ ಕಲ್ಪಾ ಹಳ್ಳಿಯಿಂದ ಮೇಘಾಲಯದ ಮಾವ್ಲಿನ್ನಾಂಗ್‌ವರೆಗಿನ ಹಳ್ಳಿಗಳ ಚಿತ್ರಗಳು ಈ ಲಿಸ್ಟ್​​ನಲ್ಲಿದೆ. ಆನಂದ್ ಮಹೀಂದ್ರಾ ಈವರೆಗೆ ಹೆಚ್ಚು ಅನ್ವೇಷಿಸದ ಸ್ಥಳಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲು ಹೆಸರುವಾಸಿಯಾಗಿದ್ದಾರೆ. ಅವರ ಇತ್ತೀಚಿನ ಟ್ವಿಟರ್ ಪೋಸ್ಟ್ ಇದಕ್ಕೆ ಉತ್ತಮ ಉದಾಹರಣೆ.

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ‘ಕಲರ್ಸ್ ಆಫ್ ಭಾರತ್’ ಎಂಬ ಟ್ವಿಟರ್ ಪುಟದ ಪೋಸ್ಟ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಪೋಸ್ಟ್‌ನಲ್ಲಿ ಭಾರತದ 10 ಅತ್ಯಂತ ಸುಂದರವಾದ ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ.

ಆನಂದ್​ ಮಹೀಂದ್ರಾ ಅವರ ಪೋಸ್ಟ್‌ಗೆ 483kಗೂ ಹೆಚ್ಚು ವೀಕ್ಷಣೆಗಳು ಮತ್ತು ಅತಿ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಭಾರತೀಯ ಹಳ್ಳಿಗಳ ಸೌಂದರ್ಯದಿಂದ ಜನರು ಮಂತ್ರಮುಗ್ಧರಾಗಿದ್ದಾರೆ. ಈ ಪೋಸ್ಟ್​​ನಲ್ಲಿರುವ ಪ್ರತೀ ಫೋಟೋಗಳು ಬಹಳ ಸುಂದರವಾಗಿದ್ದು, ಪ್ರಾಕೃತಿಕ ಸೌಂದರ್ಯ ನಿಜಕ್ಕೂ ಮನಮೋಹಕವಾಗಿದೆ. ಇದರಲ್ಲಿ ಭಾರತದ ನೈಜ ಸೌಂದರ್ಯ ಅಡಗಿದೆ. ಇಂತಹ ಅನ್ವೇಷಿಸದ ಸ್ಥಳಗಳು ನಮ್ಮ ದೇಶದ ವೈವಿಧ್ಯತೆಯ ಪರಿಪೂರ್ಣ ಸಂಕೇತವಾಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಕೆಲವರು ಆ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯ ಸವಿಯಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಆನಂದ್​ ಮಹೀಂದ್ರಾ ಅವರ ಈ ಪೋಸ್ಟ್ ಅನ್ನು ನೆಟ್ಟಿಗರು ಇಷ್ಟ ಪಟ್ಟು ತಮ್ಮ ಖಾತೆಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!