VIRAL VIDEO| ʻಟೆಂಪಲ್‌ ಆಫ್‌ ಟೀ ಸರ್ವೀಸ್‌ʼಗೆ ಹೋಗೋದಾಗಿ ಆನಂದ್‌ ಮಹೀಂದ್ರಾ ಟ್ವೀಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅದೊಂದು ದೊಡ್ಡ ಆಲದ ಮರ..ಆ ಮರದ ಕೆಳಗೆ ಒಬ್ಬ ಅಜ್ಜ ಟೀ ಅಂಗಡಿ ನಡೆಸುತ್ತಿದ್ದಾನೆ. ಆತ ಮಾಡೋ ಚಹಾಕ್ಕಾಗಿ ಸ್ಥಳೀಯರು ಆತನ ಅಂಗಡಿ ಬಳಿ ಕ್ಯೂ ಕಟ್ಟಿರುತ್ತಾರೆ. ಖ್ಯಾತ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ, ತನ್ನ ವೃದ್ಧಾಪ್ಯದಲ್ಲಿ ಯಾರನ್ನೂ ಅವಲಂಬಿಸದ ಮುದುಕನ ವ್ಯಕ್ತಿತ್ವಕ್ಕೆ ಮಾರು ಹೋದರು.

ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ‘ಟೆಂಪಲ್ ಆಫ್ ಟೀ ಸರ್ವೀಸ್’ ಎಂದು ಬಣ್ಣಿಸಿದರು. ಖಂಡಿತಾ ಈ ಅಂಗಡಿಗೆ ಹೋಗುತ್ತೇನೆಂದು ಬರೆದುಕೊಂಡಿದ್ದಾರೆ. ಅಮೃತಸರದಲ್ಲಿ ಅನೇಕ ಪ್ರವಾಸಿ ಸ್ಥಳಗಳಿವೆ. ಈ ಬಾರಿ ಅಮೃತಸರಕ್ಕೆ ಹೋದಾಗ ಗೋಲ್ಡನ್ ಟೆಂಪಲ್ ಜೊತೆಗೆ ಬಾಬಾಜಿಯವರ ‘ಟೆಂಪಲ್ ಆಫ್ ಟೀ ಸರ್ವೀಸ್’ಗೆ ಹೋಗಬೇಕು. 40 ವರ್ಷಗಳಿಂದ ಟೀ ಅಂಗಡಿ ನಡೆಸುತ್ತಿದ್ದಾರೆ. ನಮ್ಮ ಹೃದಯಗಳು ಅವರನ್ನು ಬೆಂಬಲಿಸುವ ದೊಡ್ಡ ದೇವಾಲಯಗಳಾಗಿವೆ ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಪಂಜಾಬ್ ರಾಜ್ಯದ ಅಮೃತ್ ಸರ್‌ನಲ್ಲಿ ಅಜಿತ್ ಸಿಂಗ್ ಎಂಬ ವೃದ್ಧ 40 ವರ್ಷಗಳಿಂದ ಇದೇ ಮರದ ಕೆಳಗೆ ಟೀ ಅಂಗಡಿ ನಡೆಸುತ್ತಿದ್ದಾರೆ. ಸ್ಥಳೀಯರು ಅವರನ್ನು ಪ್ರೀತಿಯಿಂದ ಬಾಬಾ ಎಂದು ಕರೆಯುತ್ತಾರೆ. ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ಟೀ ಶಾಪ್ ಮುಂದುವರಿಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!