ಮೊನ್ನೆ ಕೊರಿಯನ್, ಇಂದು ಜರ್ಮನ್ ರಾಯಭಾರಿಗಳಿಂದ ʻನಾಟು ನಾಟುʼ ಸ್ಟೆಪ್ ಮುಂದ್ಯಾರು? ಆನಂದ್ ಮಹೇಂದ್ರ ಟ್ವೀಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಎಂ.ಎಂ.ಕೀರವಾಣಿ ಅವರ ‘ನಾಟು ನಾಟು’ ಹಾಡು ಎಲ್ಲರ ಬಾಯಲ್ಲೂ ಮೊಳಗುತ್ತಿದೆ. ಆಸ್ಕರ್ ಪ್ರಶಸ್ತಿಯನ್ನೂ ಪಡೆದುಕೊಂಡು ವಿಶ್ವದ ಅತ್ಯುತ್ತಮ ಗೀತೆಯಾಯಿತು. ಆದರೆ ಈ ಹಾಡು ಸಾಮಾನ್ಯ ವಿದೇಶಿ ಪ್ರೇಕ್ಷಕರನ್ನು ಮಾತ್ರವಲ್ಲದೆ ವಿದೇಶಿ ಅಧಿಕಾರಿಗಳನ್ನು ಸಹ ಹೆಜ್ಜೆ ಹಾಕಿವಂತೆ ಮಾಡಿದೆ.

ಇತ್ತೀಚೆಗಷ್ಟೇ ಕೊರಿಯನ್ ರಾಯಭಾರಿ ಕಚೇರಿಯ ಅಧಿಕೃತ ಪ್ರತಿನಿಧಿ ಚಾಂಗ್ ಜೇ-ಬಕ್ ಮತ್ತು ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 50 ಕೊರಿಯನ್ ಮತ್ತು ಭಾರತೀಯ ಸಿಬ್ಬಂದಿ ನಾಟು ನಾಟು ಹಾಡಿಗೆ ನೃತ್ಯ ಮಾಡಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯೆ ನೀಡಿದ್ದಾರು. ಇದೀಗ ಭಾರತದಲ್ಲಿನ ಜರ್ಮನ್ ರಾಯಭಾರಿ ಅಧಿಕಾರಿಗಳೂ ಕೂಡ ನಾಟು ನಾಟು ಹಾಡಿಗೆ ನೃತ್ಯ ಮಾಡಿರುವ ವಿಡಿಯೋವನ್ನು ರಾಯಭಾರಿ ಕಚೇರಿಯ ಸಿಬ್ಬಂದಿ ಬಿಡುಗಡೆ ಮಾಡಿದ್ದಾರೆ. ಜರ್ಮನ್ ರಾಯಭಾರ ಕಚೇರಿಯ ಅಧಿಕಾರಿಯು ದೆಹಲಿಯ ಸಣ್ಣ ವ್ಯಾಪಾರಿಯೊಬ್ಬರನ್ನು ಭಾರತವು ವಿಶ್ವಪ್ರಸಿದ್ಧವಾಗಿದೆಯೇ ಎಂದು ಕೇಳುತ್ತಾರೆ. ಆಗ ಆ ವ್ಯಾಪಾರಿ ನಾಟು ನಾಟು ಹಾಡಿನ ಕೊಳಲು ನೀಡುತ್ತಾರೆ.

ಅಲ್ಲಿಂದ ಶುರುವಾದ ಹಾಡು ದೆಹಲಿಯ ಚಾಂದಿನಿ ಚೌಕ್‌ನಲ್ಲಿರುವ ಜರ್ಮನ್ ರಾಯಭಾರಿ ಕಚೇರಿಯ ಸದಸ್ಯರೆಲ್ಲ ಕುಣಿದು ಕುಪ್ಪಳಿಸುತ್ತಿದ್ದು, ಜನ ತಮ್ಮ ಫೋನ್‌ನಲ್ಲಿ ವಿಡಿಯೋ ಮಾಡಿ ಎಂಜಾಯ್ ಮಾಡುತ್ತಿದ್ದರು. ಮತ್ತು ಪ್ರಸಿದ್ಧ ಉದ್ಯಮಿ ಆನಂದ್ ಮಹೇಂದ್ರ ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.. “ನಿನ್ನೆ ಕೊರಿಯನ್ ರಾಯಭಾರ ಕಚೇರಿ, ಇಂದು ಜರ್ಮನ್ ರಾಯಭಾರ ಕಚೇರಿ. ನಾಟು ನಾಟು ಒಂದು ವಿಶ್ವ ಗೀತೆಯಾಗಲು ನನಗೆ ತುಂಬಾ ಸಂತೋಷವಾಗಿದೆ. ತದನಂತರ ಯಾವ ದೇಶದ ರಾಯಭಾರ ಕಚೇರಿ ಹೆಜ್ಜೆ ಹಾಕಲಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!