Thursday, March 23, 2023

Latest Posts

ಹವಾಮಾನ ವೈಪರೀತ್ಯ : ಆಲಿಕಲ್ಲಿನ ಮಳೆಯಿಂದಾಗಿ ಬೆಳೆದಿದ್ದ ಕಲ್ಲಂಗಡಿ ಕಳೆದುಕೊಂಡು ರೈತನ ಕಣ್ಣೀರು

ಹೊಸದಿಗಂತ ವರದಿ ಕಲಬುರಗಿ :

ರಾಜ್ಯಾದ್ಯಂತ ಉಂಟಾದ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ತಡರಾತ್ರಿ ಸುರಿದ ಆಲಿಕಲ್ಲಿನ ಮಳೆಯಿಂದಾಗಿ ರೈತ ಬೆಳೆದಿದ್ದ ಕಲ್ಲಂಗಡಿ ಸಂಪೂರ್ಣ ಹಾಳಾಗಿದೆ.

ಜಿಲ್ಲೆಯ ಆಳಂದ ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ರೈತ ಶರಣಗೌಡ ಪಾಟೀಲ್ ಅವರು ತಮ್ಮ 3.5 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದರು.
ಇನ್ನೂ ರೈತ ಶರಣಗೌಡ ಪಾಟೀಲ್ ಅವರು 5 ಲಕ್ಷ ಖಚು೯ ಮಾಡಿ ತಮ್ಮ ತೋಟದಲ್ಲಿ ಕಲ್ಲಂಗಡಿ ಬೆಳೆದಿದ್ದು,ಇನ್ನೇನು ಎರಡು ದಿನಗಳಲ್ಲಿ ಕಲ್ಲಂಗಡಿ ಕಟಾವು ಇದ್ದಿದ್ದು, ಅಷ್ಟರಲ್ಲೆ ಕಳೆದ ರಾತ್ರಿ ಸುರಿದ ಆಲಿಕಲ್ಲಿನ ಮಳೆಯಿಂದಾಗಿ ಬೆಳೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ.

ಆಲಿಕಲ್ಲು ಬಿದ್ದಿರುವುದರಿಂದ ಕಟಾವಿಗೆ ಬಂದಿದ್ದ ಕಲ್ಲಂಗಡಿ ಹಣ್ಣು ಸಂಪೂರ್ಣ ಹಾಳಾಗಿದ್ದನ್ನು ಕಂಡು ದಿಕ್ಕು ತೋಚದೆ ರೈತ ಪಾಟೀಲ್ ಚಿಂತೆಗೀಡಾಗಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!