September 23, 2026
Wednesday, September 23, 2026
spot_img

ಸದನದಲ್ಲಿ ʼಅನಂತʼ ಅಭಿನಂದನೆ: ಹೊಸ ಅಲೆಯ ನಾಯಕತ್ವ ವಹಿಸಿದ್ದ ಅನಂತ್‌ ನಾಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:ʻ

ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಯನ್ನು ಪಡೆದುಕೊಂಡ ನಮ್ಮ ಕನ್ನಡದ ನಟ ಅನಂತ್‌ ನಾಗ್‌ ಅವರಿಗೆ ಅಭಿನಂದನೆಗಳು ಎಂದು ಸದನದಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದ್ದಾರೆ.

ಚಿತ್ರರಂಗದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಸುಲಭವಾಗಿ ದೊರೆಯುವ ಪ್ರಶಸ್ತಿ ಇದಲ್ಲ. ಅಂತಹ ಪ್ರತಿಷ್ಠಿತ ಪ್ರಶಸ್ತಿಯನ್ನು ಅನಂತ್ ನಾಗ್ ಅವರು ಪಡೆದಿರುವುದು ಮಹತ್ವದ ಸಂಗತಿ. ರಾಷ್ಟ್ರ ಮಟ್ಟದಲ್ಲಿ ಕಲಾವಿದರ ಸಾಧನೆ ಮತ್ತು ವ್ಯಕ್ತಿತ್ವವನ್ನು ಗುರುತಿಸಿ ಗೌರವಿಸುವುದು ಇಡೀ ಚಿತ್ರರಂಗ ಹಾಗೂ ಕಲಾ ಕ್ಷೇತ್ರಕ್ಕೆ ಆಧುನಿಕ ಜಗತ್ತಿನಲ್ಲಿ ಮತ್ತಷ್ಟು ಉತ್ತೇಜನ ನೀಡುತ್ತದೆ ಎಂದು ಹೇಳಿದರು.

ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರಂತಹ ಮೇರು ನಟರು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದ ಕಾಲಘಟ್ಟದಲ್ಲಿಯೇ ಅನಂತ್ ನಾಗ್ ಅವರು ವಿಭಿನ್ನ ರೀತಿಯ ಚಿತ್ರಗಳ ಮೂಲಕ ತಮ್ಮದೇ ಆದ ಹೊಸ ಹಾದಿಯನ್ನು ರೂಪಿಸಿಕೊಂಡರು. 1970ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಆರಂಭವಾದ ಈ ಹೊಸ ಅಲೆಯ ನಾಯಕತ್ವ ವಹಿಸಿದವರಲ್ಲಿ ಅನಂತ್ ನಾಗ್ ಪ್ರಮುಖರು ಎಂದು ಹೇಳಿದರು.

ರಂಗಭೂಮಿಯಿಂದ ಕಲಾ ಪಯಣ ಆರಂಭಿಸಿದ ಅನಂತ್‌ ನಾಗ್‌ ಅವರು ಕಾಲಕ್ರಮೇಣ ಜನರ ಮನಸ್ಸಿನಲ್ಲಿ ಖಾಯಂ ಜಾಗ ಮಾಡಿಕೊಂಡಿದ್ದರು. ಶಂಕರ್‌ ನಾಗ್‌ ಅವರ ಜೊತೆಗೂಡಿ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿದ್ದರು. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಕನ್ನಡ ಮಣ್ಣಿಗೆ ಸೇವೆಯನ್ನು ಮಾಡಿರುವ ನಟನಿಗೆ ಈ ಪ್ರಶಸ್ತಿ ನೀಡಿರುವುದು ಅತ್ಯುತ್ತಮ ನಿರ್ಧಾರವಾಗಿದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !