ಪ್ರಧಾನಿ ಮೋದಿ ಭೇಟಿಯಾದ ಆಂಧ್ರ ಸಿಎಂ ಜಗನ್ ಮೋಹನ್: ಎನ್​ಡಿಎಯತ್ತ ವೈಎಸ್​ಆರ್​ಸಿಪಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೀಗ ಅವರ ಭೇಟಿ ಕುತೂಹಲ ಹೆಚ್ಚಿಸಿದ್ದು, ಎನ್​ಡಿಎ ಮೈತ್ರಿಕೂಟಕ್ಕೆ ಟಿಡಿಪಿ ಸೇರ್ಪಡೆ ಬಗ್ಗೆ ವರದಿಗಳು ಹರಿದಾಡುತ್ತಿದೆ.

ಸಿಎಂ ಜಗನ್​ಮೋಹ​ನ್​ ರೆಡ್ಡಿ ಅವರು ಭೇಟಿಯ ವೇಳೆ ತಿರುಪತಿ ವೆಂಕಟರಮಣನ ಫೋಟೋವನ್ನು ಪ್ರಧಾನಿಗೆ ಕಾಣಿಕೆಯಾಗಿ ನೀಡಿದರು. ಈಚೆಗಷ್ಟೇ ಆಯ್ಕೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪ ರಾಷ್ಟ್ರಪತಿ ಜಗದೀಪ್​ ಧನಕರ್​ ಅವರನ್ನೂ ಆಂಧ್ರ ಸಿಎಂ ಭೇಟಿ ಮಾಡಲಿದ್ದಾರೆ. ಚುನಾವಣೆಯ ವೇಳೆ ಈ ಇಬ್ಬರಿಗೆ ವೈಎಸ್​ಆರ್​ಸಿಪಿ ಬೆಂಬಲ ನೀಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!