Sunday, October 2, 2022

Latest Posts

ಕೃಷ್ಣ ಜನ್ಮಾಷ್ಟಮಿಯಂದು ಹೆಣ್ಣು ಹುಲಿಗಳ ಖದರ್:‌ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಷ್ಟಮಿ, ವಿಟ್ಲಪಿಂಡಿ ಅಂದ್ರೆ ಸಾಕು ತಟ್‌ ಅಂತ ನೆನಪಿಗೆ ಬರೋದು ಉಡುಪಿ. ಕೃಷ್ಣ ಜನ್ಮಾಷ್ಟಮಿ ದಿನದಂದು ಬಗೆಬಗೆಯ ವೇಷದೊಂದಿಗೆ ತಾಸೆ ಏಟಿಗೆ ವೇಷಧಾರಿಗಳ ಕುಣಿಯಕ್ಕೆ ತಲೆದೂಗದವರೇ ಇಲ್ಲ. ಬರೀ ವೇಷಧಾರಿಗಳಲ್ಲಷ್ಟೇ ಅಲ್ಲ ನೆರೆದಿರುವ ಸಾರ್ವಜನಿಕರು, ಯುವಕರು ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ.

ವೈರಲ್‌ ಆಗಿರುವ ವಿಡಿಯೋದಲ್ಲಿ ಯುವತಿಯರು ರಸ್ತೆಯಲ್ಲಿ ಹುಲಿ ಹೆಜ್ಜೆ ಹಾಕುತ್ತಿದ್ದರೆ ಅಲ್ಲಿದ್ದವರೆಲ್ಲಾ ಕಣ್ಣರಳಿಸಿ ನೋಡುತ್ತಿದ್ದಾರೆ. ಬ್ಯಾಂಡ್‌ಸೆಟ್‌ ಸೌಂಡ್‌ಗೆ ಅವರ ಹುರುಪು ಮತ್ತಷ್ಟು ಹೆಚ್ಚಾಗಿ ಹೆಣ್ಣು ಹುಲಿಗಳಂತೆ ಕುಣಿಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!