ತಮ್ಮ 50 ವರ್ಷಗಳ ದುಡಿಮೆಯ ಆಸ್ತಿಯನ್ನೆಲ್ಲಾ ಜಿಜಿಎಚ್‌ಗೆ ಬರೆದುಕೊಟ್ಟ ವೈದ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವರು ಆಸ್ತಿಯನ್ನು ಉಳಿಸುವ ಮತ್ತು ಸಂಪಾದನೆ ಗುರಿಯನ್ನಿಟ್ಟುಕೊಂಡ ತಮ್ಮ ಜೀವನವನ್ನು ನಡೆಸುತ್ತಾರೆ. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೆಲವು ವೈದ್ಯರು ರೋಗಿಗಳನ್ನು ಹೆದರಿಸಿ ಅವರಿಂದ ಸಾಧ್ಯವಾದಷ್ಟು ಸುಲಿಗೆ ಮಾಡುತ್ತಾರೆ. ಎಷ್ಟೇ ಹಣ ಕೂಡಿಟ್ಟರೂ ಕೂಡ ಅವರ ದುರಾಸೆ ಮಾತ್ರ ಕಡಿಮೆ ಆಗಲ್ಲ. ಆದರೆ, ಇಲ್ಲೊಬ್ಬ ವೈದ್ಯೆ ಸುಮಾರು 50 ವರ್ಷಗಳ ಕಾಲ ದುಡಿದ ತನ್ನ ಆಸ್ತಿಯನ್ನೆಲ್ಲ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಗುಂಟೂರು ಜಿಲ್ಲೆಯ ಉಮಾ ಗವಿ ಅಮೆರಿಕದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಮ್ಯುನಾಲಜಿಸ್ಟ್ ಮತ್ತು ಅಲರ್ಜಿ ತಜ್ಞೆಯಾದ ಆಕೆ ಮೂರು ವರ್ಷಗಳ ಹಿಂದೆ ತನ್ನ ಪತಿಯನ್ನು ಕಳೆದುಕೊಂಡರು. ಅವರಿಗೆ ಮಕ್ಕಳು ಸಹ ಇಲ್ಲ. 1965ರಲ್ಲಿ ಗುಂಟೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ವಿದ್ಯಾಭ್ಯಾಸ ಮುಗಿಸಿ ಅಮೆರಿಕಕ್ಕೆ ಹೋದರು. 40 ವರ್ಷಗಳಿಂದ ಅಲ್ಲಿ ವೈದ್ಯೆಯಾಗಿ ಕೆಲಸ ಮಾಡಿದ ಆಕೆ ಗುಂಟೂರು ಮೆಡಿಕಲ್ ಕಾಲೇಜ್ ಅಸೋಸಿಯೇಷನ್, ನಾರ್ತ್ ಅಮೇರಿಕಾದ ಡಲ್ಲಾಸ್‌ನಲ್ಲಿ ಸೆಪ್ಟೆಂಬರ್‌ನಲ್ಲಿ 17ನೇ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ನಡೆಸಿತು.

ಈ ಸಂದರ್ಭದಲ್ಲಿ ತಾವು ಓದಿದ ಜಿಜಿಎಚ್‌ಗೆ ದೇಣಿಗೆ ನೀಡುವುದಾಗಿ ಘೋಷಿಸಿದರು. ಜಿಜಿಎಚ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಮಾತಾ ಶಿಶು ಕಲ್ಯಾಣ ಭವನಕ್ಕೆ (ಎಂಸಿಎಚ್ ಬ್ಲಾಕ್) ತನ್ನೆಲ್ಲ ಆಸ್ತಿಯನ್ನು ನೀಡುವುದಾಗಿ ತಿಳಿಸಿದರು. ಕಟ್ಟಡಕ್ಕೆ ಉಮಾ ಗವಿ ಹೆಸರಿಡುತ್ತೇವೆ ಎಂದಿದ್ದಕ್ಕೆ ಅದಕ್ಕೂ ಬೇಡ ಎಂದು ಉದಾರ ಮನಸ್ಸನ್ನು ಸಾರಿದರು. ಉಮಾ ಅವರು ಇಷ್ಟು ದೇಣಿಗೆ ನೀಡುವುದನ್ನು ಕಂಡ ಉಳಿದ ಸದಸ್ಯರೂ ಭಾರೀ ದೇಣಿಗೆಯನ್ನು ಘೋಷಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!