ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಕಾರು ಅಪಘಾತ ಸಂಭವಿಸಿದೆ. ಅಪಘಾತದ ಸ್ಥಳವನ್ನು ನೋಡಿದರೆ ಕಾರು ನಿಯಂತ್ರಣ ತಪ್ಪಿ ಪೊದೆಗೆ ನುಗಿದ್ದಂತಿದೆ. ಆದರೆ ಕಾರಿನಲ್ಲಿ ಯಾರೂ ಇಲ್ಲ, ಅಪಘಾತಕ್ಕೆ ಗುರಿಯಾಗಿದ್ದ ಕಾರನ್ನು ಅಲ್ಲಿಯೇ ಬಿಟ್ಟು ಪ್ರಯಾಣಿಸುತ್ತಿದ್ದವರು ಪರಾರಿಯಾಗಿದ್ದಾರೆ. ಕಾರಣ ಅಪಘಾತವಾದ ಕಾರು ಪರಿಸೀಲನೆ ನಡೆಸಿದಾಗ ಅದರಲ್ಲಿ ಆರು ಮಚೀಲಗಳಲ್ಲಿ ಗಾಂಜಾ ಸಿಕ್ಕಿದೆ.
ಅಲ್ಲೂರು ಜಿಲ್ಲೆಯ ಅರಕು ಘಾಟ್ ರಸ್ತೆಯಲ್ಲಿ ಕಾರು ಅಪಘಾತವಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಾರು ಅಪಘಾತದಲ್ಲಿ ಯಾರಾದರೂ ಪ್ರಾಣ ಕಳೆದುಕೊಂಡಿದ್ದಾರೆಯೇ? ಅಥವಾ ಗಾಯಗೊಂಡಿದ್ದಾರೆಯೇ? ಎಂದು ತಪಾಸಣೆ ನಡೆಸಿದರು.
ಆದರೆ ಕಾರಿನಲ್ಲಿ ಗಾಂಜಾ ಚೀಲ ಬಿಟ್ಟರೆ ಮತ್ಯಾರೂ ಇಲ್ಲ. ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ ಹೀಗಾಗಿ ಸಿಕ್ಕಿಬೀಳುವ ಭೀತಿಯಿಂದ ವ್ಯಕ್ತಿಗಳು ಕಾರಿನಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ನಂಬಿದ್ದಾರೆ. ಕಾರು ನಂಬರ್ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಯಾರಾದರೂ ಅನುಮಾನಾಸ್ಪದವಾಗಿ ಕಂಡರೆ, ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸೂಚಿಸಲಾಗಿದೆ. ಅಪಘಾತದಲ್ಲಿ ಕಾರಿನ ಬಾಗಿಲು ತೆರೆದು ಕೆಲವು ಗಾಂಜಾ ಪ್ಯಾಕೆಟ್‌ಗಳು ಹೊರಗೆ ಚೆಲ್ಲಾಪಿಲ್ಲಿಯಾಗಿದ್ದವು. ಗಾಂಜಾ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.