Tuesday, March 28, 2023

Latest Posts

ಎಲ್ಲಾ ಪರಿಣಾಮ ಎದುರಿಸಲು ಸಜ್ಜಾಗಿದ್ದೇನೆ : ಚರಂತಿಮಠ

ಹೊಸದಿಗಂತ ವರದಿ ಬಾಗಲಕೋಟೆ: 

ನಾನು ಸಾರ್ವಜನಿಕವಾಗಿ ಹಾಗೂ ಬಯಲಿನಲ್ಲೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿನಿ. ಅದರಲ್ಲೇನು ಮುಚ್ಚು ಮರೆ ಇಲ್ಲ. ನಾ ಮಾತನಾಡಿರುವ ಕುರಿತು ಸಹ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನಾನು ಯಾರ ಹೆಸರು ತೆಗೆದುಕೊಂಡು,‌ವೈಯಕ್ತಿಕವಾಗಿ ಮಾತನಾಡಿಲ್ಲ.

ಪಕ್ಷದಲ್ಲಿದ್ದವರು ಹೇಗೆ ಮಾಡುತ್ತಾರೆ ಎಂದು ಕಾರ್ಯಕರ್ತರ ಮುಂದೆ ಬಿಚ್ಚಿಟ್ಟಿನಿ. ನಾನು ಮಾತನಾಡಿರುವ ಆಡಿಯೋ ಇಟ್ಟು ಕೊಂಡು ಏನೂ ಮಾಡಲು ಸಾಧ್ಯವಿಲ್ಲ‌‌. ಎಲ್ಲ ಪರಿಣಾಮಗಳನ್ನು ಎದುರಿಸಲು ಸಜ್ಜಾಗಿದ್ದೇನೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ ಪಾಕಿಸ್ತಾನ ಪದ ಬಳಕೆ ಕುರಿತು ಈಗಾಗಲೇ ಸಭೆಯಲ್ಲಿ ಯೇ ಸ್ಪಷ್ಟೀಕರಣ ನೀಡಲಾಗಿದೆ. ನವನಗರದ ಸೆಕ್ಟರ್ ನಂ.45 ಹಿಂದೆ ಬಿಟಿಡಿಎದಿಂದ ಬಿಟ್ಟು ಹೋಗಿತ್ತು ಅಲ್ಲಿ ಪರಿಶಿಷ್ಟ ಸಮುದಾಯದವರು ಹೆಚ್ಚು ಇರುವ ವಾರ್ಡ ಆಗಿತ್ತು ಅಲ್ಲಿಯ ಜನರಿಗೆ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಸಾಕಷ್ಟು ಒತ್ತು ನೀಡಲಾಗಿದೆ‌.

ಕಾಂಗ್ರೆಸ್ ‌ನಗರಸಭೆ ಸದಸ್ಯ ಹಾಜೀಸಾಬ್ ದಂಡಿನ್ ಪ್ರಚಾರಕ್ಕೆ ಮಾತನಾಡಿ ಸಭೆಯಲ್ಲಿ ಗೊಂದಲ ಸೃಷ್ಟಿ ಮಾಡುತ್ತಾರೆ. ಕ್ಷಮೆ ಕೇಳುವ ಅವಶ್ಯಕತೆ ಇಲ್ಲ. ಬಾಗಲಕೋಟೆ ಬಂದ್ ಕರೆ ಯಾವುದಕ್ಕೆ ನೀಡುತ್ತಾರೆ. ಉಪಾಧ್ಯಕ್ಷ ರ ಮುಖಕ್ಕೆ ಮಸಿ ಬಳಿಯಲಿ ಆ ಮೇಲೆ ಅದರ ಬಗ್ಗೆ ವಿಚಾರ ಮಾಡೋಣ ಎಂದರು.

ಕೇಂದ್ರ ಸರ್ಕಾರದ 45 ಲಕ್ಷ ಕೋಟಿ ಬಜೆಟ್ ಶಿಸ್ತುಬದ್ಧ, ಸಮಯೋಚಿತ,ಜನತೆಯನ್ನು ಪ್ರಲೋಬನೆಗಳಿಗೆ ,ಆಸೆ- ಆಮಿಷಗಳಿಗೆ ಒಡ್ಡದೇ ನಿರ್ಮಲವಾದ ಹಾಗೂ ಆರ್ಥಿಕ ತೆಯನ್ನು ಸದೃಢಗೊಳಿಸುವತ್ತ ದಿಟ್ಡ ಹೆಜ್ಜೆ ಇಟ್ಟಿದೆ ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಸದಾನಂದ ನಾರಾ, ಶಿವಾನಂದ ಟವಳಿ, ಸುರೇಶ ಕೊಣ್ಣೂರ ಪತ್ರಿಕಾಗೋಷ್ಠಿ ಯಲ್ಲಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!