ಹೊಸದಿಗಂತ ಗಂಗಾವತಿ:
ಅಂಗನವಾಡಿ ಕಟ್ಟಡದ ಮೇಲ್ಟಾವಣಿಯ ಕಾಂಕ್ರೀಟ್ ದಿಢೀರನೆ ಉದುರಿ ಬಿದ್ದಿದ್ದರಿಂದ ನಾಲ್ವರು ಮಕ್ಕಳು ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮೆಹಬೂಬ್ ನಗರದಲ್ಲಿ ನಡೆದಿದೆ.
ಮಹೆಬೂಬ್ ನಗರದಲ್ಲಿರುವ 11 ನೇ ಅಂಗನವಾಡಿ ಕೇಂದ್ರದ ಮೇಲ್ಪಾವಣಿ ಕಾಂಕ್ರಿಟ್ ಉದುರಿ ಬಿದ್ದಿದೆ.
ಇಂದು ಮುಂಜಾನೆ ಅಂಗನವಾಡಿಗೆ 20ಕ್ಕೂ ಹೆಚ್ಚು ಮಕ್ಕಳು ಆಗಮಿಸಿದ್ದವು. ಆದರೆ ಮುಂಜಾನೆ 10. 30ರ ಸಮಯದಲ್ಲಿ ದಿಢೀರನೆ ಕಾಂಕ್ರೀಟ್ ಉದುರಿ ಬಿದ್ದಿದೆ. ಇದರಿಂದ ನಾಲ್ಕು ಮಕ್ಕಳ ತಲೆ ಮತ್ತು ಕಾಲುಗಳಿಗೆ ಗಾಯವಾಗಿವೆ.