ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಜನತಾ ಪಕ್ಷ ದೇಶಾದ್ಯಂತ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅವರು ಎಲ್ಲಿಗೆ ಹೋದರೂ ಜಾತಿ, ಧರ್ಮ, ರಾಜ್ಯ ಮತ್ತು ಭಾಷೆಗಳ ನಡುವೆ ಒಡಕು ಮೂಡಿಸಿ, ಸಂಘರ್ಷ ಹುಟ್ಟು ಹಾಕಲು ಯತ್ನಿಸುತ್ತಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಹೇಳಿದರು.
ಬಿಜೆಪಿಯು ಪಹಾರಿ ಮತ್ತು ಗುಜ್ಜರ್ ಸಮುದಾಯದ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸಿದೆ, ಪಕ್ಷದ ಈ ಯೋಜನೆ ವಿಫಲವಾಗಲಿದೆ ಎಂದು ಹೇಳಿದ್ದಾರೆ.
“ನಫ್ರತ್ ಕೋ ಸಿರ್ಫ್ ಮೊಹಬ್ಬತ್ ಸೆ ಕಾತಾ ಜಾ ಸಕ್ತಾ ಹೈ. ಏಕ್ ತರಫ್ ನಫ್ರತ್ ಫೈಲ್ನೆ ವಾಲೆ ಲೋಗ್ ಹೈ ಔರ್ ದೂಸ್ರಿ ತರಫ್ ಮೊಹಬ್ಬತ್ ಕಿ ದುಕಾನ್ ಖೋಲ್ನೆ ವಾಲೆ ಲಾಗ್ ಹೈ. (ದ್ವೇಷವನ್ನು ಪ್ರೀತಿಯಿಂದ ಮಾತ್ರ ಜಯಿಸಲು ಸಾಧ್ಯ. ಒಂದು ಕಡೆ ದ್ವೇಷವನ್ನು ಹರಡುವವರು ಮತ್ತು ಇನ್ನೊಂದು ಕಡೆ ಪ್ರೀತಿಯನ್ನು ಪ್ರಚಾರ ಮಾಡುವವರು) ”ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ.