July 10, 2026
Friday, July 10, 2026
spot_img

ಐವಿ ಡ್ರಿಪ್‌ ಜತೆಗೇ ಕೆಲಸಕ್ಕೆ ಬಂದ ಅಂಗನವಾಡಿ ಕಾರ್ಯಕರ್ತೆ! ರಜ ಕೊಡಕ್ಕೆ ಪ್ರೂಫ್‌ ಬೇಕು ಎಂದಿದ್ದ ಅಧಿಕಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅನಾರೋಗ್ಯದ ಕಾರಣ ರಜೆ ಕೇಳಿದ್ರೆ ಅಧಿಕಾರಿಯೊಬ್ಬರು ನೋ ಎಂದಿದ್ದಾರೆ. ಅದಕ್ಕೆ ಕಾರ್ಯಕರ್ತೆ ಡ್ರಿಪ್‌ ಸಮೇತ ರಜೆ ಕೇಳೋದಕ್ಕೆ ಬಂದ ಘಟನೆ ಬಿಹಾರದಲ್ಲಿ ನಡೆದಿದೆ.

ನಡೆಯೋಕಾಗದೇ ಗಡಗಡ ನಡುಗುತ್ತಾ ಪತಿಯ ಸಹಾಯದಿಂದ ಬಂದ ಕಾರ್ಯಕರ್ತೆ ಸರ್‌ ತಗೊಳಿ ಪ್ರೂಫ್‌ ನನಗೆ ಹುಷಾರಿಲ್ಲ ಎಂದು ಹೇಳಿದ್ದಾರೆ.

ಈ ಹಿಂದೆಯೇ ನನ್ನ ಪತ್ನಿ ಅಡ್ಮಿಟ್‌ ಆಗಿದ್ದಾಳೆ ಅವಳಿಗೆ ಕೆಲಸ ಮಾಡೋದಕ್ಕೆ ಆಗೋದಿಲ್ಲ ಎಂದು ಕರೆ ಮಾಡಿದ್ದೆ. ಅದಕ್ಕೆ ಅಧಿಕಾರಿಯೊಬ್ಬರು ನಿಮ್ಮ ಪತ್ನಿಗೆ ಅನಾರೋಗ್ಯ ಎಂದು ನಂಬೋದು ಹೇಗೆ? ಪ್ರೂಫ್‌ ಏನಿದೆ ಎಂದು ಪ್ರಶ್ನಿಸಿದ್ದರು.

ಹೀಗಾಗಿ ಪತಿ ಪತ್ನಿಯನ್ನು ಆಫೀಸ್‌ಗೆ ಡ್ರಿಪ್‌ ಸಮೇತವೇ ಕರೆದುಕೊಂಡು ಬಂದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಇದು ಅಮಾನವೀಯ ಎಂದು ಕಮೆಂಟ್‌ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !