Monday, March 27, 2023

Latest Posts

ಅಮೃತಾ ಫಡ್ನವಿಸ್ ಬಳಿ 10 ಕೋಟಿ ರೂ. ಸುಲಿಗೆಗೆ ಯತ್ನಿಸಿದ ಡಿಸೈನರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಅವರು 10 ಕೋಟಿ ರೂಪಾಯಿ ಹಣ ನನಗೆ ನೀಡಬೇಕು ಇಲ್ಲದಿದ್ದರೆ, ಅವರ ವಿಡಿಯೋ ವೈರಲ್ ಆಗಲಿದೆ ಎಂದು ಡಿಸೈನರ್ ಒಬ್ಬರು ಬ್ಲಾಕ್ ಮೇಲ್ ಮಾಡಿದ್ದಾರೆ. ಅಮೃತಾ ಅವರ ದೂರಿನ ಮೇರೆಗೆ ಪೊಲೀಸರು ಡಿಸೈನರ್ ಅನಿಕ್ಷಾ ಜೈಸಿಂಘಾನಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಕೋರ್ಟ್ ಮಾರ್ಚ್ 21ರವರೆಗೆ ಕಾಲಾವಕಾಶ ನೀಡಿ ಪೊಲೀಸ್ ಕಸ್ಟಡಿಗೊಪ್ಪಿಸಿದೆ. ಅಮೃತಾ ಫಡ್ನವಿಸ್ ಕಳೆದ 16 ತಿಂಗಳಿಂದ ಡಿಸೈನರ್ ಅನಿಕ್ಷಾ ಜೈಸಿಂಘನಿ ಅವರ ಪರಿಚಯವಿದೆ. ತನ್ನ ತಂದೆ ಅನಿಲ್ ಜೈಸಿಂಘಾನಿ ವಿರುದ್ಧ ಹಲವು ಪ್ರಕರಣಗಳಿರುವುದರಿಂದ ಇವುಗಳಿಂದ ಮುಕ್ತಿ ಪಡೆಯಲು ಅಮೃತಾಗೆ ಕೋಟಿ ರೂಪಾಯಿ ಲಂಚ ನೀಡಲು ಯತ್ನಿಸಿದ್ದರು. ಆದರೆ, ಇದಕ್ಕೆ ಒಪ್ಪದ ಅಮೃತಾ ಪೊಲೀಸರಿಗೆ ದೂರು ನೀಡಿದ್ದಾರೆ.

ಅಮೃತಾ ಫಡ್ನವಿಸ್ ದೂರಿನ ಮೇರೆಗೆ ಅನಿಕ್ಷಾ ಮತ್ತು ಆಕೆಯ ತಂದೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ದಿನಗಳ ನಂತರ ಅಮೃತಾ ವಿರುದ್ಧ ಹರಿಹಾಯ್ದ ಅನಿಕ್ಷಾ ಎರಡು ವಿಡಿಯೋಗಳನ್ನು ಅಮೃತಾಳ ಫೋನ್ ಗೆ ಕಳುಹಿಸಿದ್ದಾಳೆ. ಆ ವಿಡಿಯೋಗಳಲ್ಲಿ ಅಮೃತಾ ಕೋಟ್ಯಂತರ ರೂಪಾಯಿ ತೆಗೆದುಕೊಳ್ಳುತ್ತಿದ್ದರಂತೆ. ತನಗೆ 10 ಕೋಟಿ ರೂಪಾಯಿ ಹಣ ಕೊಡಬೇಕೆಂದು ಅಲ್ಲದೆ, ಮತ್ತು ಅವರ ತಂದೆ ವಿರುದ್ಧ ಪ್ರಕರಣಗಳನ್ನು ತೊಲಗಿಸುವಂತೆ ಹೇಳಿದ್ದಾರೆ. ಇಲ್ಲವಾದರೆ ಈ ವಿಡಿಯೋಗಳನ್ನು ವೈರಲ್ ಮಾಡುತ್ತೇನೆ ಎಂದು ಅನಿಕ್ಷಾ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಅಮೃತಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬ್ಲಾಕ್ ಮೇಲ್ ಮತ್ತು ಬೆದರಿಕೆ ಪ್ರಕರಣ ದಾಖಲಿಸಿಕೊಂಡು ಅನಿಕ್ಷಾವನ್ನು ಬಂಧಿಸಿದ್ದಾರೆ.

ಆಕೆಯ ಬಳಿಯಿದ್ದ ವಿಡಿಯೋಗಳನ್ನು ಪರಿಶೀಲಿಸಿದಾಗ ಅವು ಮಾರ್ಫಿಂಗ್ ವಿಡಿಯೋಗಳು ಎಂದು ತಿಳಿದುಬಂದಿದೆ. ಇದರೊಂದಿಗೆ ಆ ವೀಡಿಯೋಗಳನ್ನು ಸೃಷ್ಟಿಸಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಡಿಸೈನರ್ ಅನಿಕ್ಷಾ ಅವರ ತಂದೆ ಅನಿಲ್ ಜೈಸಿಂಘಾನಿ ಅಂತಾರಾಷ್ಟ್ರೀಯ ಕ್ರಿಕೆಟ್ ಬುಕ್ಕಿಯಾಗಿ ಕುಖ್ಯಾತರಾಗಿದ್ದಾರೆ. ಈತನ ವಿರುದ್ಧ ಹಲವು ಪ್ರಕರಣಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!