Monday, March 27, 2023

Latest Posts

ಪೋರ್ನ್‌ಹಬ್‌ನಲ್ಲಿ ರಷ್ಯಾ ಸೇನಾಪಡೆಗೆ ‘ಬೇಕಾಗಿದ್ದಾರೆ’ ಜಾಹೀರಾತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೇಗಾದರೂ ಮಾಡಿ ಉಕ್ರೇನ್‌ನ್ನು ಯುದ್ಧದಲ್ಲಿ ಸೋಲಿಸಲೇಬೇಕು ಎಂದು ಪಣತೊಟ್ಟಿರುವ ರಷ್ಯಾ ಸೇನೆಗೆ ಹೆಚ್ಚು ಜನರಿಗೆ ನೌಕರಿ ನೀಡುತ್ತಿದೆ. ಉಕ್ರೇನ್ ವಿರುದ್ಧ ಖಾಯಂ ಸೇನೆಯೊಂದಿಗೆ ಹೋರಾಡಲು ರಷ್ಯಾ ಕಳೆದ ಆರು ತಿಂಗಳ ಹಿಂದೆ ಕೂಲಿ ಆಧಾರದ ಮೇಲೆ ತಾತ್ಕಾಲಿಕ ಸೇನಾಪಡೆಯನ್ನು ರಚಿಸಿದೆ.

ಇದಕ್ಕೆ ಪಿಎಂಸಿ ವ್ಯಾಗನಾರ್ ಗ್ರೂಪ್ ಎಂದು ಕರೆದಿದೆ, ಈ ಗ್ರೂಪ್‌ಗೆ ಇನ್ನಷ್ಟು ಸದಸ್ಯರು ಬೇಕಿದ್ದು, ಬೇಕಾಗಿದ್ದಾರೆ ಜಾಹೀರಾತನ್ನು ಅಶ್ಲೀಲ ವಿಡಿಯೋಗಳ ತಾಣವಾದ ಪೋರ್ನ್ ಹಬ್ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಪೋರ್ನ್ ಹಬ್‌ಗಳಲ್ಲಿ ಯುವಕರು ಹೆಚ್ಚಿನ ಸಂಖ್ಯೆಯ ಗ್ರಾಹಕರಾಗಿರಬಹುದು ಎನ್ನುವ ಹಿನ್ನೆಲೆಯಲ್ಲಿ ರಷ್ಯಾ ಈ ಟೆಕ್ನಿಕ್ ಬಳಸುತ್ತಿದೆ. ವಿಡಿಯೋ ತುಣುಕಿನ ಜಾಹೀರಾತಿನಲ್ಲಿ ನಾವು ಜಗತ್ತಿನ ಅತಿ ದೊಡ್ಡ ಕೂಲಿ ಆಧಾರಿತ ಸೇನಾಪಡೆಯನ್ನು ನಡೆಸುತ್ತಿದ್ದೇವೆ, ರಷ್ಯಾದ ಎಲ್ಲ ಭಾಗದಿಂದ ನಾವು ಹೋರಾಟಗಾರರನ್ನು ನೇಮಿಸಿಕೊಳ್ಳುತ್ತಿದ್ದೇವೆ, ಬನ್ನಿ ಎಂದು ಜಾಹೀರಾತು ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!