ಹೊಸದಿಗಂತ ಡಿಜಿಟಲ್ ಡೆಸ್ಕ್
ಪ್ರೇಕ್ಷಕರು ಮಾತ್ರವಲ್ಲ, ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಮೋಡಿಗೆ ಮಂತ್ರಮುಗ್ಧರಾಗಿದ್ದಾರೆ! ಹಿಂದಿ ಚಿತ್ರರಂಗದ ದಿಗ್ಗಜ ನವಾಜುದ್ದೀನ್ ಸಿದ್ದಿಕಿ ಅವರು ಕನ್ನಡದ ತಾರೆ ರಿಷಭ್ ಶೆಟ್ಟಿಯವರ ಮೇಲೆ ಅಸೂಯೆ ಪಟ್ಟಿದ್ದೇನೆ ಎಂದು ಕೆಲ ದಿನಗಳ ಹಿಂದೆ ಒಪ್ಪಿಕೊಂಡಿದ್ದರು. ಆ ಬಳಿಕ ಹೃತಿಕ್ ರೋಷನ್ ಕಾಂತಾರ ʼಅದ್ಭುತ ಚಿತ್ರʼ ಎಂದಿದ್ದರು. ಈಗ ಅನಿಲ್ ಕಪೂರ್ ಸರದಿ. ಕಾಂತಾರ ನೋಡಿ ಬಹುವಾಗಿ ಮೆಚ್ಚಿಕೊಂಡಿರುವ ಅವರು ರಿಷಭ್ ಶೆಟ್ಟರ ಬಳಿ ವಿಶೇಷ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಪ್ರಮುಖ ವೆಬ್ ಪೋರ್ಟಲ್ನೊಂದಿಗೆ ಮಾತನಾಡುವ ವೇಳೆ ಅನಿಲ್ ಕಪೂರ್ ರಿಷಬ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. “ನೆಕ್ಸ್ಟ್ ಪಿಕ್ಚರ್ ಮೇರೆ ಸಾಥ್ ಬನಾ” (ನಿಮ್ಮ ಮುಂದಿನ ಚಿತ್ರದಲ್ಲಿ ನನಗೆ ಅವಕಾಶ ನೀಡಿ)” ಎಂದು ಅನಿಲ್ ಹೇಳುವಾಗ ರಿಷಬ್ ಅವರ ಕೆಲಸದ ಅನಿಲ್ ಮುಖದಲ್ಲಿ ಮೆಚ್ಚುಗೆ ಇದ್ದುದು ಎದ್ದು ತೋರುತ್ತಿತ್ತು.
ಸಾಧಾರಣ ಬಜೆಟ್ ನಲ್ಲಿ ನಿರ್ಮಾಣವಾಗಿದ್ದ ಕಾಂತಾರ ಚಿತ್ರವು ಅಸಾಧಾರಣ ಯಶಸ್ಸನ್ನು ದಾಖಲಿಸಿತು. ಬಾಕ್ಸ್ ಆಫೀಸ್ ನಲ್ಲಿ 450 ಕೋಟಿಗಿಂತ ಹೆಚ್ಚಿನ ಗಳಿಕೆ ಮಾಡಿದ ಸಿನಿಮಾ ವಿಮರ್ಶಾತ್ಮಕ ಮತ್ತು ವಾಣಿಜ್ಯಿಕವಾಗಿ ಎರಡೂ ಕಡೆ ಗೆದ್ದಿತಲ್ಲದೆ, ಮೆಚ್ಚುಗೆಯನ್ನು ಗೆಲ್ಲಲು ಚಿತ್ರಕ್ಕೆ ಬೇಕಾಗಿರುವುದು ಗಟ್ಟಿಯಾದ ಸ್ಕ್ರಿಪ್ಟ್ ಎಂದು ಸಾಬೀತುಪಡಿಸಿದೆ. ಹಿಂದಿಗೆ ಡಬ್ ಆದ ಚಿತ್ರ ಬಾಕ್ಸ್ ಆಫೀಸ್ ದಾಖಲೆಗಳನ್ನು ಛಿದ್ರಗೊಳಿಸಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ