Friday, September 30, 2022

Latest Posts

ಹೊಸದಿಗಂತದ ಅನಿಲ ದೇಶಪಾಂಡೆ ಇನ್ನಿಲ್ಲ

ಹೊಸದಿಗಂತ ವರದಿ ಹುಬ್ಬಳ್ಳಿ :

ಹೊಸ ದಿಗಂತ ಪತ್ರಿಕೆಯ ಯಾಗದಿರಿ ಜಿಲ್ಲೆಯ ಜಿಲ್ಲಾವರದಿಗಾರ ಅನೀಲ್ ದೇಶಪಾಂಡೆ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ . ಕೆಲ ಕಾಲದಿಂದ ಇವರುಅನಾರೊಗ್ಯಕ್ಕೆ ಒಳಗಾಗಿದ್ದರು .
ಯಾದಗಿರಿ ಜಿಲ್ಲೆಯ ಕ್ರಿಯಾಶೀಲ ವರದಿಗಾರರಾಗಿದ್ದ ಅನಿಲ ದೇಶಪಾಂಡೆ ಅನೇಕ ಜನಪರ ವರದಿಗಳ ಮೂಲಕ ಗುರುತಿಸಿಕೊಂಡಿದ್ದರು. ಯಾದಗಿರಿ ಜಿಲ್ಲೆಯಲ್ಲಿ ಹೊಸದಿಗಂತ ಬೆಳವಣಿಗೆಯಲ್ಲಿ ತಮ್ಮ ಕೊಡುಗೆ ನೀಡಿದ್ದರು. ಇಳಿ ವಯಸ್ಸಿನಲ್ಲೂ ಚುರುಕಿನ ವರದಿಗಾರಿಕೆ ಮೂಲಕ ಜನರ ಮನ ಗೆದ್ದಿದ್ದರು.

ಶುಕ್ರವಾರ ಮಧ್ಯಾಹ್ನ 1ಗಂಟೆಗೆ ಸ್ವ ಗ್ರಾಮದಲ್ಲೇ ಶವ ಸಂಸ್ಕಾರ ನಡೆಯಲಿದೆ. ಅನಿಲ ದೇಶಪಾಂಡೆಯವರ ನಿಧನಕ್ಕೆ ಹೊಸದಿಗಂತ ನಿರ್ದೇಶಕ ನಿರ್ಮಲಕುಮಾರ್ ಸುರಾನ, ಸಿಇಓ ಪ್ರಕಾಶ ಪಿ.ಎಸ್, ಸಮೂಹ ಸಂಪಾದಕ ವಿನಾಯಕ ಭಟ್, ಹುಬ್ಬಳ್ಳಿ ಆವೃತ್ತಿ ಮುಖ್ಯಸ್ಥ ವಿಠ್ಠಲದಾಸ ಕಾಮತ್ ಮತ್ತು ಹೊಸ ದಿಗಂತ ಬಳಗ ಶೋಕ ವ್ಯಕ್ತಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!