ಹೊಸದಿಗಂತ ಡಿಜಿಟಲ್ ಡೆಸ್ಕ್
ಕೇವಲ 500 ರೂ.ಗಾಗಿ ನಡೆದ ಸಣ್ಣ ಜಗಳವು ಭೀಕರತೆಗೆ ತಿರುಗಿ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಂದ ಕೊಂದ ಘಟನೆ ದೆಹಲಿಯಲ್ಲಿ ನಡೆದಿದೆ.
ಶಾರುಖ್ (22) ಮೃತ ಯುವಕ. ಆತನ ಸ್ನೇಹಿತ ಸಲ್ಮಾನ್(25) ಕೊಲೆ ಆರೋಪಿ. ಪೋಲೀಸರ ಪ್ರಕಾರ, ಇಬ್ಬರೂ ಮಾದಕ ವ್ಯಸನಿಗಳಾಗಿದ್ದು, ಅವರ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿದೆ. ಆ ವೇಳೆ ಆರೋಪಿ ಸಲ್ಮಾನ್ ಸ್ನೇಹಿತನಿಗೆ ಚಾಕುವಿನಿಂದ ತಿವಿದಿದ್ದಾನೆ. ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶಾರುಖ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಶಾರುಖ್ ಕಬ್ಬಿಣದ ಕಾರ್ಖಾನೆಯಲ್ಲಿ ಡೈ ಮೇಕರ್ ಆಗಿ ಕೆಲಸ ಮಾಡುತ್ತಿದ್ದ. ಘಟನೆಯ ದಿನ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತ ಸಲ್ಮಾನ್ ಸಿಕ್ಕಿದ್ದಾನೆ. ಇಬ್ಬರೂ ಡ್ರಗ್ಸ್ ವಿಚಾರದಲ್ಲಿ ಜಗಳವಾಡಿದ್ದರು. ಶಾರುಖ್ ಕೊಲೆ ಬಳಿಕ ಸಲ್ಮಾನ್ ಮನೆಯಿಂದ ನಾಪತ್ತೆಯಾಗಿದ್ದ. ಸುಳಿವಿನ ಆಧಾರದ ಮೇಲೆ ಬಲೆ ಬೀಸಿ ಸಲ್ಮಾನ್‌ನನ್ನು ಬಂಧಿಸಲಾಗಿದೆ. ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಮಾದಕವಸ್ತುಗಳನ್ನು ತರಲು 500 ರೂ. ಪಡೆದಿದ್ದ ಬಗ್ಗೆ ಜಗಳವಾಗಿ ಸೇಡು ತೀರಿಸಿಕೊಳ್ಳಲು ಶಾರುಖ್‌ಗೆ ಚಾಕುವಿನಿಂದ ಇರಿದಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ