ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣ್‌ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ.
ಇಂದು ರಣ್‌ಬೀರ್ ಕಪೂರ್ ಜನ್ಮದಿನವಾಗಿದ್ದು, ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಯಾಗಿದೆ. ಅರ್ಜುನ್ ರೆಡ್ಡಿಯಂಥ ಸೂಪರ್ ಹಿಟ್ ಸಿನಿಮಾ ನೀಡಿದ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.
ಸಾಮಾನ್ಯ ಯುವಕ ಅನಿಮಲ್ ಆಗೋದ್ಯಾಕೆ? ಆತನ ಜೀವನದಲ್ಲಿ ಯಾವೆಲ್ಲಾ ತೊಂದರೆಗಳು ಬರುತ್ತವೆ, ಎಲ್ಲವನ್ನೂ ಮೀರಿ ಆತ ಮನುಷ್ಯನಿಂದ ಅನಿಮಲ್ ಆಗುವ ಹಿಂಟ್ ಟೀಸರ್‌ನಲ್ಲಿದೆ.
ಅನಿಮಲ್ ಟೀಸರ್‌ನಲ್ಲಿ ರಶ್ಮಿಕಾ, ಅನಿಲ್ ಕಪೂರ್ ಹಾಗೂ ಆರ್‌ಕೆ ಕಾಣಿಸಿದ್ದು, ಬಾಲಿವುಡ್‌ನ ಮತ್ತೊಂದು ಹಿಟ್ ಸಿನಿಮಾ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.