ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡು ಪ್ರಾಣಿಗಳನ್ನು ದೂರದಿಂದ ನೋಡಿದರೆ ಚೆಂದ, ಕೆಲವೊಮ್ಮೆ ಹತ್ತಿರ ಬಂದರೆ ಜೀವವೇ ಹೋದಂತಾಗುತ್ತದೆ. ಪಿಕ್ನಿಕ್ ಗೆ ತೆರಳಿದ್ದ ತಾಯಿ ಮತ್ತು ಮಗನಿಗೂ ಇದೇ ರೀತಿಯ ಅನುಭವವಾಗಿದೆ. ಊಟ ಮಾಡುತ್ತಿದ್ದ ಟೇಬಲ್‌ಗೆ ಕರಡಿಯೊಂದು ಆಕಸ್ಮಿಕವಾಗಿ ಬಂದು ಅವರು ತಮ್ಮ ತಟ್ಟೆಯಲ್ಲಿದ್ದ ಆಹಾರವನ್ನು ತಿಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೆಕ್ಸಿಕೋದ ಚಿಪಿಂಕ್ ಪರಿಸರ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಮಹಿಳೆಯೊಬ್ಬರು ತಮ್ಮ ಕುಟುಂಬದೊಂದಿಗೆ ಮೆಕ್ಸಿಕೋದ ಚಿಪಿಂಕ್ಯು ಇಕೋಲಾಜಿಕಲ್ ಪಾರ್ಕ್‌ಗೆ ತೆರಳಿದ್ದರು. ಕುಟುಂಬದೊಂದಿಗೆ ಅಲ್ಲಿ ಊಟ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಕರಡಿಯೊಂದು ಅವರ ಮೇಜಿನ ಮೇಲೆ ಹತ್ತಿ ತಟ್ಟೆಯಲ್ಲಿದ್ದ ಆಹಾರವನ್ನು ತಿನ್ನಲು ಪ್ರಾರಂಭಿಸಿತು. ಕರಡಿಯ ವರ್ತನೆಯಿಂದ ಪುಟ್ಟ ಬಾಲಕಿ ಹೆದರು ಅಮ್ಮನ ಮಡಿಲು ಸೇರಿದ್ದ. ಅಲ್ಲಿದ್ದವರು ಈ ದೃಶ್ಯವ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅದೃಷ್ಟವಶಾತ್, ತಟ್ಟೆಯಲ್ಲಿ ಆಹಾರ ಖಾಲಿ ಮಾಡಿ ಕರಡಿ ಯಾವುದೇ ಅಪಾಯ ಮಾಡದೆ ವಾಪಸಾಗಿದೆ. ಇನ್ನು ತಾಯಿ ತನ್ನ ಮಗುವನ್ನು ಕಾಪಾಡಿದ ರೀತಿಗೆ ಪ್ರಶಂಸೆಯ ಸುರಿಮಳೆಯಾಗುತ್ತಿದೆ.
A family was stunned when an intruding bear hopped onto their table to devour their food. The eldest daughter captured the scene as the bear continued munching away in Parque Ecológico Chipinque in San Pedro, Mexico 🇲🇽. The mother, as seen in the video, remained calm, shielding… pic.twitter.com/o47OkJQsNr
— Voyage Feelings (@VoyageFeelings) September 27, 2023