Wednesday, September 28, 2022

Latest Posts

ಅನಿರುದ್ಧ್‌ ಗೆ ಬ್ಯಾನ್: ಕನ್ನಡ ಕಿರುತೆರೆಯಲ್ಲಿಲ್ಲ ಅವಕಾಶ ಎಂದ ನಿರ್ಮಾಪಕರ ಸಂಘ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಿರುತೆರೆ ಧಾರವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಹಿಟ್‌ ಧಾರಾವಾಹಿ ಜೊತೆ ಜೊತೆಯಲಿ. ಈ ಧಾರಾವಾಹಿಯಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸಿರುವ ಅನಿರುದ್ಧ್‌ ಅವರನ್ನು ಸೀರಿಯಲ್‌ನಿಂದ ಮಾತ್ರವಲ್ಲದೆ, ಕನ್ನಡ ಕಿರುತೆರೆಯಿಂದಲೇ ಬ್ಯಾನ್‌ ಮಾಡಿರುವ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಹಾಗೂ ನಟನ ನಡುವೆ ಭಿನ್ನಾಭಿಪ್ರಾಯವೇ ಇದಕ್ಕೆಲ್ಲಾ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ಸ್ಪಷ್ಟಪಡಿಸಿದ್ದು, ಎರಡು ವರ್ಷಗಳ ಮಟ್ಟಿಗೆ ಅನಿರುದ್ಧ್ ಅವರನ್ನು ಯಾವುದೇ ಟಿವಿ ಶೋ, ಧಾರಾವಾಹಿ ಮುಂತಾಧ ಕಾರ್ಯಕ್ರಮಗಳಲ್ಲಿ ತೆಗೆದುಕಳ್ಳದಿರಲು ನಿರ್ಧರಿಸಿದ್ದಾರೆ.

ಏನಿದು ಘಟನೆ? 

ಜೊತೆಜೊತೆಯಲಿ ದೀರಿಯಲ್‌ ಸೆಟ್‌ನಲ್ಲಿ ಸ್ಕ್ರಿಪ್ಟ್‌ ವಿಚಾರಕ್ಕೆ ಸಂಬಂಧಿಸಿದಂತೆ ಆರೂರು ಜಗದೀಶ್‌ ಅವರನ್ನ ಮೂರ್ಖ ಎಂದು ಜರಿದು ಶೂಟಿಂಗ್‌ ಸೆಟ್‌ನಿಂದ ಹೊರಹೋಗಿದ್ದಾರೆ. ಇದು ಎಲ್ಲರ ಮನಸ್ಸಿಗೆ ಘಾಸಿಯುಂಟಾಗಿ ನಾಳೆ ಇನ್ಯಾರಿಗೂ ಆಗಬಾರದು. ಇಂತಹ ಘಟನೆ ಅನೇಕ ಬಾರಿ ನಡೆದಿವೆ. ಎಲ್ಲವನ್ನೂ ಸಹಿಸಕೊಳ್ಳುತ್ತಿದ್ದಾರೆ ಎಂದು ಪದೇ ಪದೇ ಈ ಕೆಲಸ ಮಾಡಿದ್ರೆ ಹೇಗೆ ಎಂದು ಈ ನಿರ್ಧಾರ ಮಾಡಿರುವುದಾಗಿ ಭಾಸ್ಕರ್‌ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!