Monday, September 26, 2022

Latest Posts

ಮುಂದಿನ 3 ವರ್ಷದಲ್ಲಿ ದೇಶದಲ್ಲಿ ತಲೆ ಎತ್ತಲಿವೆ 12 ಲುಲು ಹೈಪರ್‌ ಮಾರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಸಿದ್ಧ ಶಾಪಿಂಗ್‌ ಮಾಲ್‌ ಕಂಪನಿ ಲುಲು ಗ್ರುಪ್‌, ಮುಂದಿನ ಐದು ವರ್ಷಗಳಲ್ಲಿ ಭಾರತದಾದ್ಯಂತ 12 ಹೊಸ ಮಾಲ್‌ ಗಳನ್ನು ತೆರೆಯಲು ಯೋಚಿಸುತ್ತಿದೆ. ಮಾಲ್‌ಗಳು, ಹೈಪರ್‌ಮಾರ್ಕೆಟ್‌ಗಳು, ಆಹಾರ ಸಂಸ್ಕರಣಾ ಕೇಂದ್ರಗಳು ಇತ್ಯಾದಿ ವ್ಯವಹಾರಗಳನ್ನು ನಡೆಸೋ ಯುಎಇ ಮೂಲದ ಕಂಪನಿ ಲುಲು ಭಾರತದಲ್ಲಿ ಇವುಗಳನ್ನು ಅಭಿವೃದ್ಧಿ ಪಡಿಸಲು 19,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಲಭ್ಯವಿರೋ ಮಾಹಿತಿಯ ಪ್ರಕಾರ ಕಂಪನಿಯು ನೋಯ್ಡಾ, ಗುರುಗ್ರಾಮ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಮಾಲ್‌ಗಳನ್ನು ಸ್ಥಾಪಿಸಲಿದೆ.

ಮುಂದಿನ ಮೂರು ವರ್ಷಗಳಲ್ಲಿ ನಾವು 12 ಮಾಲ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದ್ದೇವೆ. ಇವು ಕೇರಳದ ಕ್ಯಾಲಿಕಟ್, ತಿರೂರ್, ಪೆರಿಂತಲ್ಮನ್ನಾ, ಕೊಟ್ಟಾಯಂ, ಪಾಲಕ್ಕಾಡ್, ನೋಯ್ಡಾ, ವಾರಣಾಸಿ, ಪ್ರಯಾಗ್‌ರಾಜ್, ಅಹಮದಾಬಾದ್ (ಉತ್ತರಪ್ರದೇಶದಲ್ಲಿ), ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನಲ್ಲಿ ಇರುತ್ತವೆ ಎಂದು ಲುಲು ಗ್ರೂಪ್ ಇಂಡಿಯಾದ ಶಾಪಿಂಗ್ ಮಾಲ್‌ಗಳ ನಿರ್ದೇಶಕ ಶಿಬು ಫಿಲಿಪ್ಸ್ ಹೇಳಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ.

ಲುಲು ಗ್ರೂಪ್ ಪ್ರಸ್ತುತ ಕೊಚ್ಚಿ, ತಿರುವನಂತಪುರಂ, ತ್ರಿಶೂರ್, ಬೆಂಗಳೂರು ಮತ್ತು ಲಕ್ನೋದಲ್ಲಿ ಐದು ಮಾಲ್‌ಗಳನ್ನು ಹೊಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!