Thursday, August 11, 2022

Latest Posts

ಅಂಕೋಲಾ ಕಾಂಗ್ರೆಸ್‌ ಕಛೇರಿಯಲ್ಲಿ ಹತ್ಯೆಗೊಳಗಾದ ಪ್ರವೀಣ್‌ ನೆಟ್ಟೂರ್‌, ಫಾಜೀಲ್‌ ಗೆ ಶ್ರದ್ಧಾಂಜಲಿ ಅರ್ಪಣೆ

ಹೊಸದಿಗಂತ ವರದಿ ಅಂಕೋಲಾ:
ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಂಗಳೂರಿನಲ್ಲಿ ಬರ್ಬರ ಹತ್ಯೆಗೊಳಗಾದ ಇಬ್ಬರು ಯುವಕರಾದ ಪ್ರವೀಣ ನೆಟ್ಟೂರ್ ಹಾಗೂ ಮಹಮದ್ ಫಾಜೀಲ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ರಾಜ್ಯದಲ್ಲಿ ಅವ್ಯಾಹತವಾಗಿ ನಡೆದಿರುವ ಹತ್ಯಾಕಾಂಡವನ್ನು ನಿಗ್ರಹಿಸುವಲ್ಲಿ ಸರ್ಕಾರ ವಿಫಲವಾಗಿದೆ. ಹಂತಕರ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಮಾಜಿ ಶಾಸಕರಾದ ಕೆ.ಎಚ್.ಗೌಡ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಗಾಂವ್ಕರ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ವಿನೋದ ನಾಯಕ, ಶಾಂತಿ ಆಗೇರ, ಯುವ ಕಾಂಗ್ರೆಸ್ ಅಧ್ಯಕ್ಷ ಜೀವನ ನಾಯಕ, ಮೀನುಗಾರ ಮುಖಂಡರು ಹಾಗೂ ಜಿಲ್ಲಾ ಹಿಂದುಳಿದ ವರ್ಗದ ಕಾರ್ಯದರ್ಶಿ ರಾಜು ತಾಂಡೇಲ್, ಕಾಂಗ್ರೆಸ್ ಪಕ್ಷದ ಮುಖಂಡರಾದ ದಾಮೋದರ ಜಿ ನಾಯ್ಕ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ವಿ ನಾಯ್ಕ, ಪಧವಿದರ ಕ್ಷೇತ್ರದ ತಾಲೂಕ ಅಧ್ಯಕ್ಷ ದಿನೇಶ ಪಳ್ಳಿಕೇರಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದರ್ಶನ ನಾಯ್ಕ, ಪ್ರಮುಖರಾದ ವಿಜು ಪಿಳೈ, ಸಂತೋಷ ಜೆ ನಾಯ್ಕ ಬಾಳೆಗುಳಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ ಅಧ್ಯಕ್ಷ ಸುರೇಶ ಎಸ್ ನಾಯ್ಕ ಅಸ್ಲೆಗದ್ದೆ ಮುಂತಾದವರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss