ದಿಗಂತ ವರದಿ ಅಂಕೋಲಾ:
ಪಟ್ಟಣದ ವಂದಿಗೆಯಲ್ಲಿ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಕೇರಳ ಮೂಲದ ಹಾಲಿ ಅಡ್ಲೂರ್ ನಿವಾಸಿ ರೋಜರ್ ಜೋಶ್ ಬಿನ್ನಿ (72) ಎಂದು ಗುರುತಿಸಲಾಗಿದ್ದು ವಂದಿಗೆಯ ಹತ್ತಿರ ಇರುವ ಜೆ.ಡಿ.ನಾಯಕ ಅವರ ಅರಸ್ ಮಾರ್ಕೆಟ್ ಅಂಗಡಿಯಲ್ಲಿ ವಾಚಮನ್ ಕೆಲಸ ಮಾಡಿಕೊಂಡಿದ್ದ ಈತ ಅತಿಯಾಗಿ ಸರಾಯಿ ಕುಡಿದು ಊಟ ಮಾಡದೇ ಉಪವಾಸ ಇರುತ್ತಿದ್ದ ಎನ್ನಲಾಗಿದೆ.
ರಕ್ತ ವಾಂತಿ ಮಾಡಿಕೊಂಡ ಸ್ಥಿತಿಯಲ್ಲಿ ಮೃತ ದೇಹ ಕಂಡು ಬಂದಿದ್ದು ಯಾವುದೋ ವಿಷ ಪದಾರ್ಥ ಸೇವಿಸಿರಬಹುದು ಅಥವಾ ಅನಾರೋಗ್ಯದ ಕಾರಣ ಮೃತ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.