”ಸಿದ್ ಶ್ರೀರಾಮ್‌ಗೆ ಮ್ಯೂಸಿಕ್ ಬೇಕಿಲ್ಲ, ಅವರೇ ಮ್ಯೂಸಿಕ್”

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಹಿಟ್ ಲಿಸ್ಟ್ ಸೇರಿದೆ.
ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಇದನ್ನು ಸಿದ್ ಶ್ರೀರಾಮ್ ಹಾಡಿದ್ದಾರೆ.
ಸಿದ್ ಬಗ್ಗೆ ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದು, ಪುಷ್ಪ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಸಿದ್ ಅವರು ಶ್ರೀವಲ್ಲಿ ಹಾಡು ಹಾಡೋಕೆ ಶುರು ಮಾಡಿದ್ರು. ಈ ವೇಳೆ ಇನ್ನೂ ಮ್ಯೂಸಿಕ್ ಸೇರಿರಲಿಲ್ಲ.

ಅವರು ಹಾಡ್ತಾ ಇದ್ದರು. ನಾನು ಮ್ಯೂಸಿಕ್ ಇನ್ಸ್ಟ್ರುಮೆಂಟ್ಸ್ ಜಾಯ್ನ್ ಆಗೋಕೆ ಕಾಯ್ತಾ ಇದ್ದೆ. ಆದರೆ ಅದು ಹಾಗೆ ಆಗಲಿಲ್ಲ. ಆದರೆ ಸಿದ್ ಹಾಡೋದು ನಿಲ್ಲಿಸಲೇ ಇಲ್ಲ. ಮ್ಯೂಸಿಕ್‌ಗಾಗಿ ಕಾಯಲೂ ಇಲ್ಲ. ತಮ್ಮ ಪಾಡಿಗೆ ತಾವು ಹಾಡ್ತಾ ಇದ್ರು. ಮ್ಯೂಸಿಕ್ ಇಲ್ಲದೆಯೂ ಕೂಡ ಸಿದ್ ಧ್ವನಿ ಮನಮುಟ್ಟುವಂತಿತ್ತು. ಸಿದ್‌ಗೆ ಮ್ಯೂಸಿಕ್ ಬೇಕಿಲ್ಲ, ಅವರೇ ಮ್ಯೂಸಿಕ್ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!