ಹೆಸರಷ್ಟೇ ಅನ್ನಭಾಗ್ಯ, ಬಟ್‌ ಸಿದ್ದು ಸರ್ಕಾರ ಮಾಡ್ತಿರೋದು ಕನ್ನಭಾಗ್ಯ: ಅಶೋಕ್‌ ವ್ಯಂಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಅನ್ನಭಾಗ್ಯ ಎಂದುಕೊಂಡು ಬಡವರಿಗೆ ಕನ್ನಭಾಗ್ಯ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.

ಕೊಳೆಗೇರಿ ಪ್ರದೇಶ ಅರಸು ಕಾಲೋನಿಗೆ ಭೇಟಿ ನೀಡಿದ ಸಮದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಡವರಿಗೆ ಉಣ್ಣಲು ಅನ್ನ ಕೊಡಬೇಕಾದ ಸರ್ಕಾರ ಅನ್ನವನ್ನು ಕದಿಯುವ ಕೆಲಸ ಮಾಡಿದೆ ಎಂದು ಟೀಕಿಸಿದರು.

ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದುಮಾಡಲಾಗಿದೆ ಎಂದು ಸಿಎಂ ಹೇಳುತ್ತಾರೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 250 ಸರ್ಕಾರಿ ನೌಕರರ ಬಳಿ ಕಾರ್ಡ್ ಇತ್ತು ಎಂದರೂ ಅದ್ಹೇಗೆ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಎಂದು ಅಶೋಕ್ ಪ್ರಶ್ನಿಸಿದರು.

ಹೊಸದಾಗಿ ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಸಚಿವರು ಹೇಳುತ್ತಾರೆ. ಬಿಪಿಎಲ್ ಕಾರ್ಡ್ ರದ್ದು ಮಾಡುವಾಗ ಅರ್ಜಿ ಕೊಟ್ಟಿದ್ದೀರಾ? ನೋಟಿಸ್ ಕೊಟ್ಟಿದ್ದೀರಾ? ನೀವು ಮಾಡಿರುವ ತಪ್ಪಿಗೆ ಬಡವರಿಗೆ ಯಾಕೆ ತೊಂದರೆ ಕೊಡುತ್ತೀರಿ ಎಂದು ಅಶೋಕ್ ಕಿಡಿಕಾರಿದರು. ಅಲ್ಲದೆ, ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದವರಿಂದ ಲಂಚ ಪಡೆಯಲು ಇದು ಪಿತೂರಿ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!