ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಲಿವುಡ್‌ನಲ್ಲಿ ವಿಲನ್ ಮತ್ತು ಹಲವು ಬಗೆಯ ಪಾತ್ರಗಳ ಮೂಲಕ ಗಮನ ಸೆಳೆದ ನಟ ಮೇಘನಾಥನ್ ವಿಧಿವಶರಾಗಿದ್ದಾರೆ. ಪತ್ನಿ ಸುಶ್ಮಿತಾ, ಮಗಳು ಪಾರ್ವತಿ ಅವರನ್ನು ನಟ ಅಗಲಿದ್ದಾರೆ.
ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ನಟ ಮೇಘನಾಥ್‌ನ್ (60) ಬಳಲುತ್ತಿದ್ದರು. ಅವರನ್ನು ಕೋಝಿಕ್ಕೋಡ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇಂದು (ನ.21) ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಟನ ನಿಧನಕ್ಕೆ ಮಾಲಿವುಡ್ ಚಿತ್ರರಂಗ ಸಂತಾಪ ಸೂಚಿಸಿದೆ