ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದಿಂದ ಮುಂಬರುವ ಕ್ಯಾಲೆಂಡರ್ ವರ್ಷದಲ್ಲಿ ಸಾಂದರ್ಭಿಕ ರಜಾ ಪಟ್ಟಿ ಘೋಷಣೆಯಾಗಿದ್ದು, ಸರ್ಕಾರಿ ನೌಕರರಿಗೆ ವೈಯಕ್ತಿಕ ರಜೆಗಳನ್ನು ಹೊರತುಪಡಿಸಿ 99 ರಜಾ ದಿನಗಳನ್ನು ಸಿಗಲಿದೆ. ಇದರಲ್ಲಿ 19 ದಿನ ಸಾರ್ವತ್ರಿಕ ರಜಾ ದಿನಗಳಿವೆ.
2023ರಲ್ಲಿ ಜನವರಿ 26ರ ಗಣರಾಜ್ಯೋತ್ಸವದಿಂದ ಆರಂಭವಾಗುವ ರಜೆಗಳ ಪಟ್ಟಿಯು ಡಿಸೆಂಬರ್ 25ರ ಕ್ರಿಸ್ಮಸ್ವರೆಗೂ ಘೋಷಣೆ ಮಾಡಲಾಗಿದೆ.
ಅಷ್ಟೇ ಅಲ್ಲದೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂತೆ ಒಟ್ಟು 24 ರಜೆಗಳು, 53 ಭಾನುವಾರಗಳು ರಜೆ ಇರಲಿವೆ. 19 ಸಾರ್ವತ್ರಿಕ ರಜೆಗಳ ಜತೆಗೆ 2 ಪರಿಮಿತ ರಜೆ ಪಡೆಯಬಹುದಾಗಿದೆ. ಒಟ್ಟು 99 ರಜೆಗಳನ್ನು ನೀಡಲಾಗಿದೆ. ಇನ್ನು ವೈಯಕ್ತಿಕವಾಗಿ ಪಡೆಯಬಹುದಾದ ಸಾಮಾನ್ಯ ರಜೆಗಳು, ಅನಾರೋಗ್ಯ ರಜೆಗಳು ಈ ಪಟ್ಟಿಯಲ್ಲಿ ಇಲ್ಲ .
ಇನ್ನುಹಬ್ಬ ಹರಿದಿನಗ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ಬಂದ ಕಾರಣಕ್ಕೆ 6 ರಜೆಗಳು ಕೈತಪ್ಪಿವೆ. ಅದ್ಯಾವುದೇನೆಂದರೆ ಜನವರಿ 15ರಂದು ಮಕರ ಸಂಕ್ರಾಂತಿ (ಭಾನುವಾರ), ಏಪ್ರಿಲ್ 23ರಂದು ಬಸವ ಜಯಂತಿ(ಭಾನುವಾರ), ನವೆಂಬರ್ 12ರಂದು ನರಕ ಚತುರ್ದಶಿ (ಭಾನುವಾರ), ಅಕ್ಟೋಬರ್ 14ರಂದು ಮಹಾಲಯ ಅಮಾವಾಸ್ಯೆ (ಎರಡನೇ ಶನಿವಾರ), ಏಪ್ರಿಲ್ 22ರಂದು ರಂಜಾನ್ (ನಾಲ್ಕನೇ ಶನಿವಾರ) ಹಾಗೂ ಅಕ್ಟೋಬರ್ 28ರ (ನಾಲ್ಕನೇ ಶನಿವಾರ) ಕೈತಪ್ಪಿವೆ.
ಉಳಿದ ರಜೆ ಪಟ್ಟಿ :
ಜನವರಿ 26 ಗುರುವಾರ ಗಣರಾಜ್ಯೋತ್ಸವ
ಫೆಬ್ರವರಿ 18 ಶನಿವಾರ ಮಹಾ ಶಿವರಾತ್ರಿ
ಮಾರ್ಚ್ 22 ಬುಧವಾರ ಯುಗಾದಿ ಹಬ್ಬ
ಏಪ್ರಿಲ್ 3 ಸೋಮವಾರ ಮಹಾವೀರ ಜಯಂತಿ
ಏಪ್ರಿಲ್ 7 ಶುಕ್ರವಾರ ಗುಡ್ ಫ್ರೈಡೇ
ಏಪ್ರಿಲ್ 14 ಶುಕ್ರವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
ಮೇ 1 ಸೋಮವಾರ ಕಾರ್ಮಿಕ ದಿನಾಚರಣೆ
ಜೂನ್ 29 ಗುರುವಾರ ಬಕ್ರೀದ್
ಜುಲೈ 29 ಶನಿವಾರ ಮೊಹರಂ ಕಡೇ ದಿನ
ಆಗಸ್ಟ್ 15 ಮಂಗಳವಾರ ಸ್ವಾತಂತ್ರ ದಿನ
ಸೆಪ್ಟೆಂಬರ್ 18 ಸೋಮವಾರ ವರಸಿದ್ಧಿ ವಿನಾಯಕ ವ್ರತ
ಸೆಪ್ಟೆಂಬರ್ 28 ಗುರುವಾರ ಈದ್- ಮಿಲಾದ್
ಅಕ್ಟೋಬರ್ 2 ಸೋಮವಾರ ಗಾಂಧಿ ಜಯಂತಿ
ಅಕ್ಟೋಬರ್ 23 ಸೋಮವಾರ ಮಹಾನವಮಿ, ಆಯುಧ ಪೂಜೆ
ಅಕ್ಟೋಬರ್ 24 ಮಂಗಳವಾರ ವಿಜಯದಶಮಿ
ನವೆಂಬರ್ 1 ಬುಧವಾರ ಕನ್ನಡ ರಾಜ್ಯೋತ್ಸವ
ನವೆಂಬರ್ 14 ಮಂಗಳವಾರ ಬಲಿಪಾಢ್ಯಮಿ, ದೀಪಾವಳಿ
ನವೆಂಬರ್ 30 ಗುರುವಾರ ಕನಕದಾಸ ಜಯಂತಿ
ಡಿಸೆಂಬರ್ 25 ಸೋಮವಾರ ಕ್ರಿಸ್ಮಸ್