Saturday, April 1, 2023

Latest Posts

ಕೇಂದ್ರ ಸರ್ಕಾರದಿಂದ ಐದು ರಾಜ್ಯಗಳಿಗೆ ಹಣಕಾಸು ನೆರವು ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

2022 ರ ಪ್ರವಾಹ, ಭೂಕುಸಿತ ಮತ್ತು ಮೇಘಸ್ಫೋಟದಿಂದ ಹಾನಿಗೊಳಗಾದ ಐದು ರಾಜ್ಯಗಳಿಗೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (NDRF) ಅಡಿಯಲ್ಲಿ ₹ 1,816.16 ಕೋಟಿ ಹೆಚ್ಚುವರಿ ಸಹಾಯವನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯು, ನೈಸರ್ಗಿಕ ವಿಕೋಪಗಳನ್ನು ಎದುರಿಸಿದ ಐದು ರಾಜ್ಯಗಳ ಜನರಿಗೆ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಂಕಲ್ಪವನ್ನು ತೋರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ ಸಚಿವಾಲಯ ಮಾಹಿತಿ ನೀಡಿದೆ.

ಒಟ್ಟು ₹1,816.162 ಕೋಟಿ ಕೇಂದ್ರದ ನೆರವಿನಲ್ಲಿ ಅಸ್ಸಾಂಗೆ ₹520.466 ಕೋಟಿ, ಹಿಮಾಚಲ ಪ್ರದೇಶಕ್ಕೆ ₹239.31 ಕೋಟಿ, ಕರ್ನಾಟಕಕ್ಕೆ ₹941.04 ಕೋಟಿ, ಮೇಘಾಲಯಕ್ಕೆ ₹47.326 ಕೋಟಿ ಹಾಗೂ ನಾಗಾಲ್ಯಾಂಡ್‌ಗೆ ₹68.02 ಕೋಟಿ ಮಂಜೂರಾಗಿದೆ.
2022-23ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರವು 25 ರಾಜ್ಯಗಳಿಗೆ ತಮ್ಮ ಎಸ್‌ಡಿಆರ್‌ಎಫ್‌ನಲ್ಲಿ ₹15,770.40 ಕೋಟಿ ಬಿಡುಗಡೆ ಮಾಡಿತ್ತು. ಎನ್‌ಡಿಆರ್‌ಎಫ್‌ನಿಂದ ನಾಲ್ಕು ರಾಜ್ಯಗಳಿಗೆ 502.744 ಕೋಟಿ ರೂ. ಅನುದಾನ ನೀಡಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!