ಪುದುಚೇರಿ ಸರ್ಕಾರದ ಬಜೆಟ್: 300 ರೂ. ಮಾಸಿಕ ಎಲ್‌ಪಿಜಿ ಸಬ್ಸಿಡಿ ಘೋಷಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ಪುದುಚೇರಿ ಸರ್ಕಾರ ಜನರಿಗೆ 300 ರೂ. ಮಾಸಿಕ ಎಲ್‌ಪಿಜಿ ಸಬ್ಸಿಡಿಯನ್ನು ಘೋಷಿಸಿದೆ.

ಮುಖ್ಯಮಂತ್ರಿ ಎನ್ ರಂಗಸಾಮಿ ಅವರು 2023-24ನೇ ಸಾಲಿನ ಬಜೆಟ್‌ನಲ್ಲಿ ಇದಕ್ಕಾಗಿ 126 ಕೋಟಿ ರೂ. ಮೀಸಲಿಟ್ಟಿದೆ.
ವಿವಿಧ ಇಲಾಖೆಗಳ ಸಾಧನೆಗಳನ್ನು ವಿವರಿಸಿದ ರಂಗಸ್ವಾಮಿ, ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ಒಂದು ಸಿಲಿಂಡರ್‌ಗೆ 300 ರೂ. ಸಬ್ಸಿಡಿ ನೀಡುವ ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.

11,600 ಕೋಟಿ ರೂ. ತೆರಿಗೆ ಮುಕ್ತ ಬಜೆಟ್ ಮಂಡಿಸಿದರು. LPG ಸಬ್ಸಿಡಿ ಯೋಜನೆಯು ಕುಟುಂಬ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ. ವಿವಿಧ ದೇಶಗಳ ತಮಿಳು ವಿದ್ವಾಂಸರು ಭಾಗವಹಿಸುವ “ವಿಶ್ವ ತಮಿಳು ಸಮ್ಮೇಳನ”ವನ್ನೂ ಸರ್ಕಾರ ಇಲ್ಲಿ ನಡೆಸಲಿದೆ ಎಂದು ಸಿಎಂ ಹೇಳಿದರು.

ಯುವಕರಿಗೆ ಉದ್ಯೋಗ ಕಲ್ಪಿಸಲು 100 ಕೋಟಿ ರೂ.ಗೂ ಹೆಚ್ಚು ಹೂಡಿಕೆಯೊಂದಿಗೆ ಕೈಗಾರಿಕೆ ಆರಂಭಿಸುವ ಉದ್ಯಮಗಳಿಗೆ ಶೇ 1ರಷ್ಟು ಸಹಾಯಧನ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!