ಮಗುವಿನ ಶವ ಅಪ್ಪಿಕೊಂಡ ಮಹಿಳೆಯ ಚಿತ್ರಕ್ಕೆ ‘ವರ್ಲ್ಡ್ ಪ್ರೆಸ್‌ಫೋಟೋ ಆಫ್ ದಿ ಇಯರ್’ ಅವಾರ್ಡ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಸಾಲಿನ ಪ್ರತಿಷ್ಟಿತ ‘ವರ್ಲ್ಡ್ ಪ್ರೆಸ್‌ಫೋಟೋ ಆಫ್ ದಿ ಇಯರ್’ ಪ್ರಶಸ್ತಿ ರಾಯ್ಟರ್ಸ್‌ನ ಛಾಯಾಗ್ರಾಹಕ ಫೆಲೆ ಮುಹಮ್ಮದ್ ಸಲೀಂ ಅವರ ಮುಡಿಗೇರಿದೆ.

ಗಾಝಾಪಟ್ಟಿಯಲ್ಲಿ ಐದು ವರ್ಷದ ಮಗುವಿನ ಮೃತದೇಹವನ್ನು ಅಪ್ಪಿಹಿಡಿದು ಕುಳಿತಿರುವ ಮಹಿಳೆಯೋರ್ವರ ಚಿತ್ರವನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಕ್ಷಿಣ ಗಾಝಾದ ಖಾನ್‌ಯೂನಿಸ್ ನಗರದಲ್ಲಿರುವ ನಾಸೆರ್ ಆಸ್ಪತ್ರೆಯಲ್ಲಿ 2023ರ ಅಕ್ಟೋಬರ್ 17ರಂದು ಈ ಫೋಟೋವನ್ನು ತೆಗೆಯಲಾಗಿದೆ.

ಫೆಲೆಸ್ತೀನಿಯನ್ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಮೃತಪಟ್ಟವರಿಗಾಗಿ ಅವರ ಕುಟುಂಬದವರು ಆಸ್ಪತ್ರೆಯ ಶವಾಗಾರದಲ್ಲಿ ಹುಡುಕುತ್ತಿರುವ ವೇಳೆ ಇನಾಸ್ ಅಬು ಮಾಮರ್ ಎಂಬ ಫೆಲೆಸ್ತೀನ್ ಮಹಿಳೆ ಬಟ್ಟೆಯಲ್ಲಿ ಸುತ್ತಿರುವ ತನ್ನ ಸೋದರನ ಪುತ್ರಿಯ ಮೃತದೇಹವನ್ನು ಕೈಗಳಲ್ಲಿ ಹಿಡಿದುಕೊಂಡು ದುಃಖಿಸುತ್ತಿರುವ ಫೋಟೋ ಇದಾಗಿದೆ.

ಈ ಪ್ರತಿಷ್ಠಿತ ಪ್ರಶ್ತಿಯನ್ನು ನೆದರ್ಲ್ಯಾಂಡ್ ಮೂಲದ ವರ್ಲ್ಡ್ ಪ್ರೆಸ್ ಫೋಟೋ ಫೌಂಡೇಷನ್ ಕೊಡಮಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!