ಈ ಮಾಲ್‌ನಲ್ಲಿ ಎಲ್ಲವೂ ಫ್ರೀ…ತಮಗೆ ಇಷ್ಟವಾದದ್ದನ್ನು ಉಚಿತವಾಗಿ ತೆಗೆದುಕೊಳ್ಳುವ ಅವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಾಪಿಂಗ್ ಮಾಲ್‌ಗೆ ಹೋದರೆ ಹಣ ಹಾಕಿ ವಸ್ತುಗಳನ್ನು ಖರೀದಿಸುತ್ತೇವೆ. ಆದರೆ ನೀವು ಈ ‘ಮಾಲ್’ಗೆ ಹೋದರೆ, ನೀವು ಎಲ್ಲವನ್ನೂ ಉಚಿತವಾಗಿ ತೆಗೆದುಕೊಂಡು ಹೋಗಬಹುದು. ಯಾವುದೇ ಶುಲ್ಕವನ್ನು ಪಾವತಿಸದೆ ತಮಗೆ ಇಷ್ಟವಾದದ್ದನ್ನು ಉಚಿತವಾಗಿ ತೆಗೆದುಕೊಳ್ಳಬಹುದು. ಈ ಮಾಲ್ ಅನ್ನು ಬಡವರಿಗಾಗಿ ನಿರ್ಮಿಸಲಾಗಿದೆ. ಬಡವರು ಯಾರು ಬೇಕಾದರೂ ಇಲ್ಲಿಗೆ ಬಂದು ಕಂಬಳಿ, ಸ್ವೆಟರ್, ಸ್ಯಾಂಡಲ್, ಸೂಟ್‌ಕೇಸ್ ಇತ್ಯಾದಿಗಳನ್ನು ಯಾರನ್ನೂ ಕೇಳದೆ ಮತ್ತು ಯಾವುದೇ ಶುಲ್ಕವನ್ನು ಪಾವತಿಸದೆ ತೆಗೆದುಕೊಂಡು ಹೋಗಬಹುದು. ಅದುವೇ ‘ಅನೋಖಾ ಮಾಲ್’.

ಮಧ್ಯಪ್ರದೇಶದ ರಾಜಧಾನಿ ರಹೀಮ್‌ನಗರದಲ್ಲಿರುವ ಅನೋಖಾ ಮಾಲ್‌ನಲ್ಲಿ ಬಡವರಿಗಾಗಿ ಬಟ್ಟೆಗಳಿವೆ. ಯಾವುದೇ ಹಿಂಜರಿಕೆಯಿಲ್ಲದೆ..ಯಾರನ್ನೂ ಕೇಳದೆ ತಮಗೆ ಬೇಕಾದುದನ್ನು ಮುಕ್ತವಾಗಿ ತೆಗೆದುಕೊಳ್ಳಬಹುದು. ಚಳಿಗಾಲದಲ್ಲಿ ಬಡವರು ಮತ್ತು ಕಾರ್ಮಿಕರ ಕಷ್ಟಗಳನ್ನು ಅರಿತು ಡಾ. ಅಹಮದ್ ರಜಾ ಖಾನ್ ಈ ಮಾಲ್ ಅನ್ನು ಸ್ಥಾಪಿಸಿದರು. ಐದು ವರ್ಷಗಳ ಹಿಂದೆ ಈ ಅನೋಖಾ ಮಾಲ್ ಕಲ್ಪನೆ ಹುಟ್ಟಿತು.

ಮಾಲ್‌ನಲ್ಲಿ ಸ್ವೆಟರ್‌ಗಳು, ಹೊದಿಕೆಗಳು, ಚಪ್ಪಲಿಗಳು, ಸೂಟ್‌ಕೇಸ್‌ಗಳು, ಕ್ವಿಲ್ಟ್‌ಗಳು, ಹಾಸಿಗೆ ಮತ್ತು ಇತರ ವಸ್ತುಗಳನ್ನು ಅನೇಕ ದಾನಿಗಳು ದಾನ ಮಾಡಿದ್ದಾರೆ. ಬಡವರ ನಿರ್ಗತಿಕರು ಈ ಮಾಲ್‌ಗೆ ಬಂದು ತೆಗೆದುಕೊಂಡು ಹೋಗಬಹುದು. ಇಲ್ಲಿಯ ವಸ್ತುಗಳನ್ನು ಯಾರ ಬಳಿಯೂ ಕೈಚಾಚದೆ ಉಚಿತವಾಗಿ ತೆಗೆದುಕೊಂಡು ಹೋಗುವುದು ಈ ‘ಅನೋಖಾ ಮಾಲ್’ನ ವಿಶೇಷತೆ.

ಈ ಮಾಲ್ ಸ್ಥಾಪನೆಯ ಹಿಂದೆ ಡಾ.ಅಹಮದ್ ಅವರ ಶ್ರಮ ಅತ್ಯಂತ ಶ್ಲಾಘನೀಯ. ತನಗೆ ಬಂದ ಐಡಿಯಾವನ್ನು ಕಾರ್ಯರೂಪಕ್ಕೆ ತರಲು ದಾನಿಗಳಿಂದ ಸ್ಪಂದನೆ ಪಡೆಯಲು ತುಂಬಾ ಶ್ರಮಿಸಿದರು. ತಮ್ಮ ವಿಚಾರವನ್ನು ಹಲವರಿಗೆ ತಿಳಿಸಿ ಮನವರಿಕೆ ಮಾಡಿಕೊಟ್ಟು ಈ ಮಾಲ್ ಗೆ ದೇಣಿಗೆ ನೀಡಲು ಅವರ ಪ್ರಯತ್ನ ಶ್ಲಾಘನೀಯ ಎನ್ನುತ್ತಾರೆ ದಾನಿಗಳು. ಈ ಮಾಲ್‌ಗೆ ಸಾಕಷ್ಟು ಪ್ರಚಾರ ನೀಡಿದ್ದು, ದಾನಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿರುವುದರಿಂದ ಅನೋಖಾ ಮಾಲ್ ಇದೀಗ ಬಡವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!