ವಾಹನ ಉದ್ದಿಮೆಗೂ ವಿಸ್ತರಿಸಿದ ಉದ್ಯೋಗ ಕಡಿತ: 3,200 ಉದ್ಯೋಗಿಗಳನ್ನು ವಜಾಗೊಳಿಸಲಿದೆ ಫೋರ್ಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಹಿಂಜರಿತದ ಭೀತಿಯಿಂದ ಪ್ರಪಂಚದ ಅನೇಕ ದೊಡ್ಡ ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಹೊರಹಾಕುತ್ತಿವೆ. ತಂತ್ರಜ್ಞಾನ ಉದ್ದಿಮೆಗಳು, ಇ ಕಾಮರ್ಸ್‌ ಕಂಪನಿಗಳು ಸೇರಿದಂತೆ ದೈತ್ಯ ಕಂಪನಿಗಳು ಸಾವಿರಾರುನುದ್ಯೋಗಿಗಳನ್ನು ಹೊರಹಾಕಿದ್ದಾರೆ. ಇದೀಗ ವಾಹನ ಉದ್ದಿಮೆ ಕ್ಷೇತ್ರಕ್ಕೂ ಈ ಉದ್ಯೋಗ ಕಡಿತಗಳು ಕಾಲಿಟ್ಟಿದ್ದು ಪ್ರಪಂಚದ ಪ್ರಮುಖ ಕಾರ್‌ ತಯಾರಕ ಕಂಪನಿಯಾದ ಫೋರ್ಡ್‌ ತನ್ನ ಸಾವಿರಾರು ಉದ್ಯೋಗಿಗಳನ್ನು ಹೊರಹಾಕಲಿದೆ.

ಫೋರ್ಡ್ ಮೋಟಾರ್ ಕಂಪನಿಯು ಯುರೋಪ್‌ನಾದ್ಯಂತ ಸುಮಾರು 3,200 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಅಮರಿಕದಲ್ಲಿ ಹೆಚ್ಚಿದ ಉದ್ಯೋ ಕಡಿತಗಳು ಜಾಗತಿಕ ಮಾರುಕಟ್ಟೆಯನ್ನು ಪ್ರಭಾವಿಸಿದ್ದು ಇದರ ಜೊತೆಗೆ ಜಾಗತಿಕವಾಗಿ ಎಲೆಕ್ಟ್ರಿಕ್‌ ವಾಹನಗಳಿಗೆ ಮನ್ನಣೆ ದೊರೆಯುತ್ತಿದ್ದು ಫೋರ್ಡ್‌ ಕಂಪನಿಯು ಎಲೆಕ್ಟ್ರಿಕ್‌ ವಾಹನಗಳಕಡೆಗೆ ಗಮನ ನೀಡುತ್ತಿದ್ದು ಹೀಗಾಗಿ ವೆಚ್ಚ ಕಡಿತದ ಭಾಗವಾಗಿ ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ಯೋಜಿಸಿದೆ.

ಈ ಉದ್ಯೋಗಕಡಿತವು ಬಹುತೇಕ ಜರ್ಮನಿಯಲ್ಲಿ ಪ್ರಭಾವ ಬೀರಲಿದ್ದು ಉತ್ಪನ್ನ ಅಭಿವೃದ್ಧಿ ಮತ್ತು ಆಡಳಿತ ಕ್ಷೇತ್ರಗಳಲ್ಲಿನ ಪಾತ್ರಗಳ ಮೇಲೆ ಪರಿಣಾಮ ಬೀರುತ್ತವೆ. ಈ ಕಡಿತವು ಯುರೋಪ್‌ನಲ್ಲಿ ಸುಮಾರು 65 ಶೇಕಡಾ ಅಭಿವೃದ್ಧಿ ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದ್ದು ಕಂಪನಿಯು ಅಭಿವೃದ್ಧಿ ಚಟುವಟಿಕೆಗಳನ್ನು ಯುಎಸ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!