ಕಾಂಗ್ರೆಸ್‌ ಗೆ ಮತ್ತೊಂದು ಹೊಡೆತ: ಜಾರ್ಖಂಡ್ ​ನ ಏಕೈಕ ಸಂಸದೆ ಗೀತಾ ಕೋಡಾ ಬಿಜೆಪಿ ಸೇರ್ಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಗೆ (Lok Sabha Elections) ದಿನಗಳು ಬಾಕಿಯಿರುವ ಹೊತ್ತಿನಲ್ಲೇ ಕಾಂಗ್ರೆಸ್‌ನ ಪ್ರಮುಖ ಶಾಸಕರು, ಸಂಸದರು ಬಿಜೆಪಿಯತ್ತ ತಮ್ಮ ಹೆಜ್ಜೆ ಇಡುತ್ತಿದ್ದು, ಇದೀಗ ಜಾರ್ಖಂಡ್‌ನಲ್ಲಿ (Jharkhand) ಕಾಂಗ್ರೆಸ್‌ ಸಂಸದೆ ಗೀತಾ ಕೋಡಾ ಏಕಾಏಕಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಜಾರ್ಖಂಡ್​ನ ಏಕೈಕ ಕಾಂಗ್ರೆಸ್​ ಸಂಸದೆ ಗೀತಾ ಕೋಡಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್, ಜೆಎಂಎಂ ಮತ್ತು ಆರ್‌ಜೆಡಿ ಮೈತ್ರಿಕೂಟದ ಬಗ್ಗೆ ಗೀತಾ ಕೋಡಾ ಅತೃಪ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೀತಾ ಕೋಡಾ ಅವರು ಜಾರ್ಖಂಡ್​ನ ಮಾಜಿ ಮುಖ್ಯಮಂತ್ರಿ ಮಧುಕೋಡಾ ಅವರ ಪತ್ನಿ.

ಗೀತಾ ಗೋಡಾ ಅವರು 2009 ರಿಂದ 2019 ರವರೆಗೆ ಎರಡು ಬಾರಿ ಶಾಸಕರಾಗಿದ್ದರು. ಅವರು ಮೊದಲ ಬಾರಿಗೆ ಸಿಂಗ್ಭೂಮ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಮಧು ಕೋಡಾ ಅವರು ಸೆಪ್ಟೆಂಬರ್ 2006 ರಿಂದ ಆಗಸ್ಟ್ 2008 ರವರೆಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು.

ಗೀತಾ ಕೋಡ ಅವರು ಭಾನುವಾರದವರೆಗೂ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಫೆಬ್ರವರಿ 16 ರಂದು ನಡೆದ ಸಂಪುಟ ವಿಸ್ತರಣೆಯಲ್ಲಿ, ಚಂಪೈ ಸೊರೆನ್ ಅವರು ಹಿಂದಿನ ಹೇಮಂತ್ ಸರ್ಕಾರದಲ್ಲಿ ಸಚಿವರಾಗಿದ್ದ ಕಾಂಗ್ರೆಸ್ ಕೋಟಾದ ಅದೇ 4 ಶಾಸಕರನ್ನು ಸಚಿವರನ್ನಾಗಿ ಮಾಡಿದರು. ಇದರಿಂದ ಕುಪಿತಗೊಂಡ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿದರು.
ರಾಜ್ಯ ಪಕ್ಷದ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಅವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾದರು. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಜಾರ್ಖಂಡ್‌ನ 14 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದವು. ಗೀತಾ ಕೋಡಾ ಅವರು ಸಿಂಗ್‌ಭೂಮ್ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.

ಈ ಹಿಂದೆ ಅವರು 2009 ರಲ್ಲಿ ತಮ್ಮ ಪತಿ ಮಧು ಕೋಡಾ ಅವರು ಸ್ಥಾಪಿಸಿದ ಜೈ ಭಾರತ್ ಸಮಂತ ಪಕ್ಷದ ಸದಸ್ಯರಾಗಿದ್ದರು. 2009 ರ ಜಾರ್ಖಂಡ್ ಅಸೆಂಬ್ಲಿ ಚುನಾವಣೆಯಲ್ಲಿ ಜಗನಾಥಪುರ ಕ್ಷೇತ್ರವನ್ನು ಗೆದ್ದ ಕಾರಣ ಗೀತಾ ಕೋಡಾ ಜೈ ಭಾರತ್ ಸಮಂತ ಪಕ್ಷದ ಏಕೈಕ ಶಾಸಕರಾಗಿದ್ದರು. ಆದರೆ, 2018ರ ನವೆಂಬರ್‌ನಲ್ಲಿ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!