SHOCKING | ಗಝಲ್ ಮಾಂತ್ರಿಕ ಗಾಯಕ ಪಂಕಜ್ ಉದಾಸ್ ವಿಧಿವಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ಹಿನ್ನೆಲೆ ಗಾಯಕ ಪಂಕಜ್ ಉದಾಸ್ ಇಂದು ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಪಂಕಜ್ ಉದಾಸ್ ಅವರು ಮುಖ್ಯವಾಗಿ ಗಝಲ್ ಗಾಯಕರು ಎಂದೇ ಖ್ಯಾತರಾಗಿದ್ದರು.

ಪಂಕಜ್ ಉದಾಸ್ ಅವರು ಮುಖ್ಯವಾಗಿ ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಹಿಂದಿ ಚಿತ್ರಗಳ ಅಸಂಖ್ಯಾತ ಗೀತೆಗಳನ್ನು ಹಾಡಿದ್ದ ಗಾಯಕ ಪಂಕಜ್ ಉದಾಸ್ ಅವರು ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ ‘ಸ್ಪರ್ಶ’ ಚಿತ್ರದ ‘ಚೆಂದಕ್ಕಿಂತ ಚೆಂದ ನೀನೇ ಸುಂದರ..,’ ಗೀತೆಯನ್ನು ಹಾಡಿ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರ ಮೆಚ್ಚುಗೆ ಕೂಡ ಗಳಿಸಿದ್ದರು.

ಹಿಂದಿಯಲ್ಲಿ ಅವರು ಹಾಡಿರುವ ಮೊಹ್ರಾ ಚಿತ್ರದ ‘ನಾ ಕಜರೇ ಕೀ ಧರ್’ ಹಾಡು ಜನಮನ ಸೂರೆಗೊಂಡಿದೆ. ‘ಚಿಟ್ಟಿ ಆಯೀ ಹೈ, ಮಾತ್ ಕರ್ ಇತನಾ ಗುರೂರ್, ಚಾಂದಿ ಜೈಸಾ ರಂಗ್ ಹೈ ತೇರಾ’ ಮುಂತಾದ ಗೀತೆಗಳನ್ನು ಜನರು ಇಂದಿಗೂ ಗುನುಗುತ್ತಲೇ ಇದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!