Friday, September 22, 2023

Latest Posts

FARMERS SUICIDE | ಚಿಕ್ಕಮಗಳೂರಿನಲ್ಲಿ ಮತ್ತೋರ್ವ ಅನ್ನದಾತ ಆತ್ಮಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿನ್ನೆಯಷ್ಟೇ ರೈತನೊಬ್ಬ ಆತ್ಮಹತ್ಯೆ ಶರಣಾಗಿದ್ದು, ಇಂದು ಮತ್ತೋರ್ವ ರೈತ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರಿನ ಪರಮೇಶ್ವರಪ್ಪ ಆತ್ಮಹತ್ಯೆ ಮಾಡಿಕೊಂಡ ಅನ್ನದಾತ.

ನಿಗದಿತ ಸಮಯಕ್ಕೆ ಮಳೆ ಬಾರದೆ ಚಿಂತೆಗೀಡಾಗಿದ್ದ ರೈತ, ಬೆಳೆ ನಾಶದಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪರಮೇಶ್ವರಪ್ಪ ತಮ್ಮ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು, ಆದರೆ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು.

ಒಟ್ಟಾರೆ ಐದು ಲಕ್ಷ ರೂಪಾಯಿ ಸಾಲ ಮಾಡಿದ್ದ ಪರಮೇಶ್ವರಪ್ಪ ಸಾಲಬಾಧೆ ಹಾಗೂ ಬೆಳೆ ಕೈಗೆ ಸಿಗನ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!