ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ಘೋರ ದುರಂತ ಸಂಭವಿಸಿದ್ದು, ವಿದ್ಯುತ್ ಸ್ಪರ್ಶಿಸಿ ತಂದೆ ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಪ್ರಭಾಕರ್ ಹುಂಡಿ (75) ಮತ್ತು ಮಂಜುನಾಥ ಹುಂಡಿ (32) ಮೃತ ದುರ್ದೈವಿಗಳು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ವಿದ್ಯುತ್ ಕಂಬಕ್ಕೆ ಬೆಂಬಲವಾಗಿ ವೈಯರ್ ಕಟ್ಟಲಾಗಿತ್ತು. ಪ್ರಭಾಕರ್ ಹುಂಡಿ ಅವರು ಮನೆ ಮುಂದಿನ ಕಸ ತೆಗೆಯುವಾಗ ನೆಲಕ್ಕೆ ಬಿದ್ದಿದ್ದ ವೈಯರ್ ಹಿಡಿದುಕೊಂಡಿದ್ದಾರೆ. ಈ ವೇಳೆ ಒಮ್ಮೆಲೆ ವಿದ್ಯುತ್ ಪ್ರವಹಿಸಿದೆ. ತಂದೆ ಒದ್ದಾಡುವುದನ್ನು ಕಂಡ ಮಗ ಮಂಜುನಾಥ ರಕ್ಷಣೆಗಾಗಿ ಮುಂದಾಗಿದ್ದು, ಈ ವೇಳೆ ಆತನಿಗೂ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.