Wednesday, June 7, 2023

Latest Posts

ದಕ್ಷಿಣ ಆಫ್ರಿಕಾದಿಂದ ತಂದ ಮತ್ತೊಂದು ಚೀತಾ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಕ್ಷಿಣ ಆಫ್ರಿಕಾದಿಂದಕಳೆದ ವರ್ಷ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿದ್ದ ಚೀತಾಗಳ ಪೈಕಿ ಮತ್ತೊಂದು ಚೀತಾ ಮೃತಪಟ್ಟಿದೆ. ಚೀತಾಗಳನ್ನು ತಂದು ಉದ್ಯಾನಕ್ಕೆ ಬಿಟ್ಟಾಗಿನಿಂದ ಮೃತಪಟ್ಟ ಚೀತಾಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹೆಣ್ಣು ಚೀತಾ ಮರಿ ಮೃತಪಟ್ಟಿದ್ದು, ಚೀತಾಗಳ ನಡುವಿನ ಸಂಘರ್ಷದಿಂದಾಗಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್​ ತಿಂಗಳಲ್ಲಿ ಸಾಶಾ ಎಂಬ ಚೀತಾ ಕಿಡ್ನಿ ಸೋಂಕಿನಿಂದ ಮೃತಪಟ್ಟಿತ್ತು. ಅದಾದ ಮೇಲೆ ಏಪ್ರಿಲ್​ನಲ್ಲಿ ಉದಯ್​ ಎಂಬ ಚೀತಾ ಮರಣಹೊಂದಿತ್ತು. ಕೆಲ ದಿನಗಳ ಹಿಂದಷ್ಟೇ ದಕ್ಷಾ ಎಂಬ ಚೀತಾ ಅಸುನೀಗಿತ್ತು. ಈಗ ಮತ್ತೊಂದು ಚೀತಾ ಮೃತಪಟ್ಟಿದೆ.

ಇಲ್ಲಿಯವರೆಗೆ ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದೆ. ಭಾರತದಲ್ಲಿ ಹೋಗಿರುವ ಚೀತಾ ಸಂತತಿಯನ್ನು ಪುನರುಜ್ಜೀವನ ಗೊಳಿಸುವ ಸಲುವಾಗಿ ದಕ್ಷಿಣ ಆಫ್ರಿಕಾದಿಂದ ಚೀತಾಗಳನ್ನು ಕರೆತರಲಾಗುತ್ತಿದೆ. ಮೊದಲ ಹಂತದಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ತರಲಾಗಿತ್ತು. ಎರಡನೇ ಹಂತದಲ್ಲಿ 12 ತರಲಾಗಿತ್ತು. ಈ ಚೀತಾಗಳನ್ನು ಹಂತಹಂತವಾಗಿ ವಿಶಾಲವಾದ ಕಾಡಿಗೆ ಬಿಡಲಾಗುತ್ತಿದೆ. ಅಂದರೆ ರಾಷ್ಟ್ರೀಯ ಉದ್ಯಾನವನದಲ್ಲಿ, ಸುತ್ತಲೂ ಬೇಲಿಯಿದ್ದ ಜಾಗದಲ್ಲಿ ಸದ್ಯ ಅವುಗಳನ್ನು ಇರಿಸಲಾಗಿತ್ತು, ನಂತರ ಬೇಲಿಯಾಚೆಗಿನ ವಿಶಾಲ ಕಾಡಿಗೆ ಬಿಡಲಾಗುತ್ತದೆ. ಈಗಾಗಲೇ ನಾಲ್ಕು ಚೀತಾಗಳನ್ನು ಹಾಗೆ ಕಾಡಿಗೆ ಬಿಡಲಾಗಿದ್ದು, ಮಾನ್ಸೂನ್​ ಒಳಗೆ ಇನ್ನೂ ಐದು ಚೀತಾಗಳನ್ನು ಬಿಡುವುದಾಗಿ ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!