ಹೊಸದಿಗಂತ ವರದಿ, ತುಮಕೂರು :
ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ತಿಪಟೂರು ತಾಲ್ಲೂಕಿನ ಕಸಬಾ ಹೋಬ ಹೈನುಗಾರಿಕೆಯ ಕಾರ್ಯದಲ್ಲಿ ತೊಡಗಿರುವ ಕೂಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಸುಭಾಷ್ ಎಂಬುವ ವ್ಯಕ್ತಿ ಸ್ವಂತ ಮಗಳ ಮೇಲೆ ಆತ್ಯಾಚಾರ ಮಾಡಿರುವುದು ಘಟನೆ ನಡೆದಿದೆ.
ಉತ್ತರ ಪ್ರದೇಶದ ಕುಟುಂಬವು ಗಂಡ- ಹೆಂಡತಿ, ಮಗಳು ಸುಮಾರು ಎಂಟು ತಿಂಗಳಿಂದ ಇಲ್ಲಿ ವಾಸವಾಗಿತ್ತು. ರಾತ್ರಿ ಹೆಂಡತಿ ಮಲಗಿದ ನಂತರ ಮಗಳ ಮೇಲೆ ಆತ್ಯಾಚಾರ ಮಾಡಿದ್ದು. ಹೆಣ್ಣು ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಾಗ ತಾಯಿ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಮಾಡಿದಾಗ ಗರ್ಭವತಿ ಆಗಿರುವುದು ಕಂಡುಬಂದಿದ್ದು ನಂತರ ಸಂಬಂಧಪಟ್ಟ ಇಲಾಖೆಗೆ ಆಸ್ಪತ್ರೆಯಿಂದ ತಿಳಿಸಲಾಗಿದೆ.
ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.