ಹೊಸದಿಗಂತ ಡಿಜಿಟಲ್ ಡೆಸ್ಕ್:
2 ದಿನಗಳ ಬ್ರೂನೆ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಐತಿಹಾಸಿಕ ಸುಲ್ತಾನ್ ಒಮರ್ ಅಲಿ ಸೈಫುದ್ದೀನ್ ಮಸೀದಿಗೆ ಭೇಟಿ ನೀಡಿದ್ದಾರೆ.
ಈ ಕ್ಷಣ ಮಸೀದಿಯಲ್ಲಿ ಸ್ವಲ್ಪ ಸಮಯ ಕಾಲ ಕಳೆದಿದ್ದಾರೆ.
ಪ್ರಸ್ತುತ ಸುಲ್ತಾನ್ ಹಸ್ಸಾನಲ್ ಬೊಲ್ಕಿಯಾ ಅವರ ತಂದೆಯ ಹೆಸರಿನಲ್ಲಿ ಈ ಮಸೀದಿಯನ್ನು 1958ರಲ್ಲಿ ನಿರ್ಮಿಸಲಾಯಿತು. ಸುಲ್ತಾನ್ ಸೈಫುದ್ದೀನ್ ಅವರನ್ನು ಆಧುನಿಕ ಬ್ರೂನಿಯ ವಾಸ್ತುಶಿಲ್ಪಿ ಎಂದು ಪರಿಗಣಿಸಲಾಗಿದೆ.
ಈ ಹಿಂದೆ 2016ರಲ್ಲಿ ಅಂದಿನ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಈ ಐತಿಹಾಸಿಕ ಮಸೀದಿಗೆ ಭೇಟಿ ನೀಡಿದ್ದರು.
ಸುಮಾರು 15 ನಿಮಿಷಗಳ ಕಾಲ ಮಸೀದಿಯಲ್ಲಿ ತಂಗಿದ್ದ ಮೋದಿ ಆ ಮಸೀದಿಯೊಳಗೆ ಓಡಾಡಿ, ವಿಡಿಯೋ ವೀಕ್ಷಿಸಿದರು. ನಂತರ ಇಮಾಮ್ ಅವರೊಂದಿಗೆ ಸಂತಸ ಹಂಚಿಕೊಂಡರು.
ಮೋದಿ ಅವರ ಭೇಟಿಯು ಮೇ 1984ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಭಾರತದಿಂದ ಮೊದಲ ಉನ್ನತ ಮಟ್ಟದ ಪ್ರವಾಸವಾಗಿದೆ. ಸುಲ್ತಾನ್ ಒಮರ್ ಅಲಿ ಸೈಫುದ್ದೀನ್ ಮಸೀದಿಯು ಆಗ್ನೇಯ ಏಷ್ಯಾದ ಅತ್ಯಂತ ಸುಂದರವಾದ ಮಸೀದಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಈ ಮಸೀದಿಯ ನಿರ್ಮಾಣವು ಸುಮಾರು 5 ವರ್ಷಗಳ ಕಾಲ ನಡೆಯಿತು.