SHOCKING | ಮತ್ತೊಂದು ಅನಾಹುತ, ತೆರೆದ ಬೋರ್‌ವೆಲ್‌ಗೆ ಬಿದ್ದ ಆರು ವರ್ಷದ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇತ್ತೀಚೆಗಷ್ಟೇ ರಾಜ್ಯದಲ್ಲಿ ಎರಡು ವರ್ಷದ ಬಾಲಕ ಸಾತ್ವಿಕ್‌ ಬೋರ್‌ವೆಲ್‌ಗೆ ಬಿದ್ದಿದ್ದು, ಈ ಘಟನೆ ಬಗ್ಗೆ ಜನ ಜಾಗೃತಿವಹಿಸೋಕೂ ಮುನ್ನವೇ ಮತ್ತೊಂದು ಅನಾಹುತ ಸಂಭವಿಸಿದೆ.

ಮಧ್ಯಪ್ರದೇಶದ ರೇವಾ ಜಿಲ್ಲೆಯ ಕೃಷಿ ಭೂಮಿಯಲ್ಲಿ ಆರು ವರ್ಷದ ಬಾಲಕನೋರ್ವ ತೆರೆದ ಬೋರ್​​ವೆಲ್​​ಗೆ ಬಿದ್ದಿದ್ದಾನೆ.

ಆರು ವರ್ಷದ ಮಯಂಕ್‌ ಕೊಲ್‌ 50 ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದಾನೆ. ಈಗಾಗಲೇ ರಕ್ಷಣಾ ಕಾರ್ಯ ಆರಂಭವಾಗಿದ್ದು, ಬಾಲಕನ ರಕ್ಷಣೆಗೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಕ್ಯಾಮೆರಾದಲ್ಲಿ ಬಾಲಕನ ದೇಹದ ಯಾವ ಭಾಗವೂ ಇನ್ನೂ ಕಾಣಿಸಿಲ್ಲ.

ಬಾಲಕ ಹಾಗೂ ಆತನ ಸ್ನೇಹಿತರ ಫೀಲ್ಡ್‌ನಲ್ಲಿ ಆಟ ಆಡುತ್ತಿದ್ದರು. ಸಂಜೆ ಐದು ಗಂಟೆಗೆ ಬಾಲಕ ಬಾವಿಗೆ ಬಿದ್ದಿದ್ದಾನೆ. ಸದ್ಯ ಆಮ್ಲಜನಕ ನೀಡಲಾಗಿದೆ. ಈ ಘಟನೆ ಗೊತ್ತಾಗುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. ಬಾಲಕನನ್ನು ಬೋರ್​ವೆಲ್​ನಿಂದ ಹೊರತೆಗೆಯಲು ಕಾರ್ಯಚರಣೆ ಆರಂಭಗೊಂಡಿದೆ. ಎರಡು ಜೆಸಿಬಿ ಮೂಲಕ ಕೆಲಸಗಳು ನಡೆಯುತ್ತಿವೆ. ವಾರಣಾಸಿಯ ರಕ್ಷಣಾ ತಂಡ ಶೀಘ್ರದಲ್ಲೇ ಸ್ಥಳಕ್ಕೆ ಬರಲಿದ್ದು ಮಗುವನ್ನು ಕಾಪಾಡಲು ಪ್ರಯತ್ನಗಳು ನಡೆಯುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!