ಸಲ್ಮಾನ್ ಫ್ಯಾಮಿಲಿಯಲ್ಲಿ ಮತ್ತೊಂದು ಡಿವೋರ್ಸ್: ವಿಚ್ಛೇದನಕ್ಕೆ ಮುಂದಾದ ಸೀಮಾ ಖಾನ್-ಸೊಹೈಲ್ ಖಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ನಟ ಸೊಹೈಲ್ ಖಾನ್ ಮತ್ತು ಪತ್ನಿ ಸೀಮಾ ಖಾನ್ ಅವರ 24 ವರ್ಷಗಳ ದಾಂಪತ್ಯದಲ್ಲಿ ಬಿರುಕು ಬೀರಿದ್ದು, ಶುಕ್ರವಾರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಜೋಡಿ 1998 ರಲ್ಲಿ ವಿವಾಹವಾಗಿದ್ದರು, ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
ವಿಚ್ಚೇದನಕ್ಕಾಗಿ ಇವರಿಬ್ಬರು ಮುಂಬೈನ ಕೌಟುಂಬಿಕ ನ್ಯಾಯಾಲಯದ ಹೊರಗೆ ಕಂಡುಬಂದಿದ್ದಾರೆ ಅಂಥ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸೋಹೈಲ್ ಅವರು ಸಲ್ಮಾನ್ ಅವರ ಕಿರಿಯ ಸಹೋದರರಾಗಿದ್ದು ಇವರಿಗೂ ಮುನ್ನ ಅರ್ಬಾಜ್​ ಕೂಡ ತಮ್ಮ ಪತ್ನಿಯಿಂದ ದೂರ ಇದ್ದಾರೆ. ನಟ, ನಿರ್ದೇಶಕರೂ ಆಗಿರುವ ಸೋಹೈಲ್ ಖಾನ್ ಅವರು ಪತ್ನಿ ಸೀಮಾ ಖಾನ್ ಸಮಕ್ಷಮವಾಗಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು.
ವಿಚ್ಛೇದನದ ಬಗ್ಗೆ ಇಬ್ಬರೂ ಈವರೆಗೆ ಯಾವುದೇ ಹೇಳಿಕೆ ನೀಡಲ್ಲ. ಆದರೆ, ಈಗಾಗಲೇ ಅವರು ಬೇರೆ ಬೇರೆಯಾಗಿಯೇ ಇದ್ದಾರೆ ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!