ಗಡಿಯಲ್ಲಿ ಮತ್ತೊಂದು ಪಾಕ್‌ ಡ್ರೋನ್‌ ಹೊಡೆದುರುಳಿಸಿದ ಬಿಎಸ್‌ಎಫ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಮೃತಸರ ಸೆಕ್ಟರ್‌ನಲ್ಲಿ ಶುಕ್ರವಾರ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತೊಂದು ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದೆ. ಕಳೆದ ಕೆಲ ದಿನಗಳಲ್ಲಿ ಪಂಜಾಬ್ ಗಡಿಯಲ್ಲಿ ಬಿಎಸ್‌ಎಫ್ ಸಿಬ್ಬಂದಿ ನೆಲಸಮಗೊಳಿಸಿರುವ ಮೂರನೇ ಡ್ರೋನ್ ಇದಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಬಿಎಸ್‌ಎಫ್ ವಕ್ತಾರರು, “ಶುಕ್ರವಾರ ಬೆಳಿಗ್ಗೆ 7.45 ಕ್ಕೆ ಅಮೃತಸರ ಸೆಕ್ಟರ್‌ನ ಪುಲ್ಮೋರಾದಲ್ಲಿ ಗಡಿ ಹೊರಠಾಣೆ ಬಳಿ ಒಳನುಗ್ಗುತ್ತಿದ್ದ ಪಾಕಿಸ್ತಾನಿ ಡ್ರೋನ್ ಅನ್ನು ಬಿಎಸ್‌ಎಫ್ ಸಿಬ್ಬಂದಿ ಪತ್ತೆ ಮಾಡಿದರು. ಡ್ರೋನ್ ಅನ್ನು ತಕ್ಷಣವೇ ಹೊಡೆದುರುಳಿಸಲಾಯಿತು. ಅದು ತಂದಿರಬಹುದಾದ ಕಳ್ಳಮಾಲಿನ ಪತ್ತೆಗೆ ಆ ಪ್ರದೇಶದಲ್ಲಿ ಹುಡುಕಾಟ ನಡೆಯುತ್ತಿದೆ ಎಂದಿದ್ದಾರೆ.
ಡ್ರೋನ್ ಆರು ಅಡಿ ಉದ್ದವಿದ್ದು, 25,000 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇದು 25 ಕೆಜಿ ವಸ್ತು ಸಾಗಿಸಬಲ್ಲದು. ಜೊತೆಗೆ ಪೇಲೋಡ್ ಅನ್ನು ಬೀಳಿಸಲು ಬಿಡುಗಡೆಯ ಕಾರ್ಯವಿಧಾನವನ್ನು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!