ಎಂಗೇಜ್ ಆದ ಮತ್ತೊಂದು ಕಿರುತೆರೆ ಜೋಡಿ: ನವಜೋಡಿಗೆ ಬಂತು ಶುಭಹಾರೈಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ಕೆಲವು ದಿನಗಳ ಹಿಂದೆ `ಸತ್ಯ’ ಧಾರಾವಾಹಿಯ ನಟ ಸಾಗರ್ ಗೌಡ ಎಂಗೇಜ್ ಆದ ಬೆನ್ನಲ್ಲೇ ಇದೀಗ ಕಿರುತೆರೆಯ ಮತ್ತೊಂದು ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ.

`ಪಾರು’ ಸೀರಿಯಲ್ ನಟ ಸಿದ್ದು ಜೊತೆ ಪ್ರಿಯಾ ಜೆ ಆಚಾರ್ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.

ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಈ ಜೋಡಿ ಆ ನಂತರ `ಧಮಾಕ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಆ ನಂತರದಲ್ಲಿ ಗುರುಹಿರಿಯರ ಒಪ್ಪಿಗೆ ಪಡೆದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸಿದ್ದು ಮೂಲಿಮನಿ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಧಮಾಕ, ವಿಕ್ರಾಂತ್‌ರೋಣ, ರಂಗಿತರಂಗ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಪ್ರಿಯಾ `ಗಟ್ಟಿಮೇಳ’ ಸೀರಿಯಲ್ ಜೊತೆ ಪರಭಾಷೆ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಪ್ರಿಯಾ ಹುಟ್ಟುರಾದ ದಾವಣಗೆರೆಯಲ್ಲಿ ಎಂಗೇಜ್‌ಮೆಂಟ್ ನಡೆದಿದೆ. ಈ ಸಂಭ್ರಮಕ್ಕೆ ಪಾರಾ ಮತ್ತು ಗಟ್ಟಿಮೇಳ ಸೀರಿಯಲ್ ತಂಡ ಸಾಕ್ಷಿಯಾಗಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!