ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಸಿನಿಮಾ ರಂಗದಲ್ಲಿ ಅದ್ದೂರಿಯಾಗಿ ತೆರೆಕಂಡು ಇಡೀ ವಿಶ್ವದಲ್ಲೇ ಅಭಿಮಾನಿಗಳಿಂದ ಮೆಚ್ಚುಗೆ ಪಡೆದ ಸಿನಿಮಾ ಯಶ್ ನಟಿಸಿರುವ ‘ಕೆಜಿಎಫ್’ ಹಾಗು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ಕಾಂತಾರ ಚಿತ್ರ.
ಈ ಎರಡು ಸಿನಿಮಾ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿ ರಾಷ್ಟ್ರ ಮಟ್ಟದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.
ಈ ಚಿತ್ರ ಕಂಡವರು ಅನೇಕ ರೀತಿಯಲ್ಲಿ ಫಿದಾ ಆಗಿದ್ದಾರೆ . ಹಲವಾರು ನಾಯಕರ ಅನುಕರಣೆಯನ್ನು ಮಾಡತೊಡಗಿದರು. ಸಿನಿಮಾದ ಕೆಲವು ಡೈಲಾಗ್ ಕೂಡ ಟ್ರೋಲ್ ಆದವು. ಆದರೆ ಇಲ್ಲಿ ಈ ಎರಡೂ ಸಿನಿಮಾಗಳ ಹೆಸರಿನಲ್ಲಿ ಹೋಟೆಲ್ ಶುರುವಾಗುತ್ತಿವೆ.
ಹೌದು, ಈಗಾಗಲೇ ಕೆಜಿಎಫ್ ಹೆಸರಿನಲ್ಲಿ ಬೆಂಗಳೂರಿನ ಸಹಕಾರ ನಗರದ ಕೊಡಿಗೆಹಳ್ಳಿ ಗೇಟ್ ಬಳಿ ಹೋಟೆಲ್ ವೊಂದು ಶುರುವಾಗಿದೆ. ಇದರ ಬೆನ್ನಲ್ಲೆ ಮಂಗಳೂರಿನಲ್ಲೂ ಕಾಂತಾರ ಹೋಟೆಲ್ ಅತೀ ಶೀಘ್ರದಲ್ಲೇ ಪ್ರಾರಂಭ ಮಾಡುವುದಾಗಿ ಸುದ್ದಿಯಾಗಿದೆ.
ಕಾಂತಾರ ಹೆಸರಿನಲ್ಲಿ ಶುರುವಾಗಲಿರುವ ಹೋಟೆಲ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.