ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸ್ಫೋಟಕ ಸತ್ಯದ ಮೂಲಕ ಸಿನಿಮಾ ಜಗತ್ತಿನಲ್ಲಿಯೇ ತಲ್ಲಣ ಸೃಷ್ಟಿಸಿರುವ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಈಗ ಮತ್ತೊಂದು ಸ್ಪೋಟಕ ಸುದ್ದಿ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೊಸ ಸಂಚಲನ ಮೂಡಿಸಿದೆ.
ಪ್ರಮೋಷನ್ಗೆ ತಂಡವನ್ನು ಆಹ್ವಾನಿಸಿಲ್ಲ ಎಂಬ ಕಾರಣ ಮುಂದಿಟ್ಟು ನೆಟ್ಟಿಗರು ಸಿಟ್ಟಿಗೇರಿ ಬಾಯ್ಕಾಟ್ ಕಪಿಲ್ ಶರ್ಮಾ ಟ್ರೆಂಡ್, ಟ್ರೋಲ್ ಆರಂಭಿಸಿದ್ದರೆ, ಇತ್ತ ಕಪಿಲ್ ತಮ್ಮ ಶೋಗೆ ಚಿತ್ರತಂಡವನ್ನು ಆಹ್ವಾನಿಸಿದ್ದರು. ಆದರೆ ನಾವೇ ಈ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದ್ದೆವು ಎಂದು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಅನುಪಮ್ ಖೇರ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Thank you paji @AnupamPKher for clarifying all the false allegations against me ❤️🙏 और उन सब दोस्तों का भी शुक्रिया जिन्होंने बिना सच जाने मुझे इतनी मोहब्बत दी 😃 खुश रहिए, मुस्कुराते रहिये 🙏 #thekapilsharmashow #Isupportmyself 🤗 pic.twitter.com/hMxiIy9W8x
— Kapil Sharma (@KapilSharmaK9) March 14, 2022
ಕಪಿಲ್ ಶರ್ಮಾ ಶೋನಿಂದ ಎರಡು ತಿಂಗಳ ಹಿಂದೆಯೇ ಚಿತ್ರತಂಡಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ ಈ ಸಿನೆಮಾ ಗಂಭೀರ ವಿಚಾರವನ್ನು ಒಳಗೊಂಡಿದೆ. ಹಾಸ್ಯ ಕಾರ್ಯಕ್ರಮದಲ್ಲಿ ಇದು ಸೂಕ್ತವಲ್ಲ ಎಂಬ ಕಾರಣಕ್ಕೆ ನಾವು ಈ ನಿರ್ಧಾರಕ್ಕೆ ಬಂದೆವು ಎಂದು ಖೇರ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿರುವ ಕಪಿಲ್ ಶರ್ಮಾ, ನನ್ನ ಮೇಲಿನ ಆರೋಪ ಸುಳ್ಳು ಎಂಬುದನ್ನು ಸ್ಪಷ್ಟಪಡಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.