ಕೇರಳದಲ್ಲಿ ಮತ್ತೊಂದು ನಕಲಿ ಮತದಾನ: ಮೃತಪಟ್ಟ ಅತ್ತೆಯ ಹೆಸರಲ್ಲಿ ಮತಚಲಾಯಿಸಿದ ಸೊಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೃದ್ಧೆಯ ಬದಲು ಬೂತ್ ಏಜೆಂಟ್ ಮತಚಲಾಯಿಸಿ ವಿವಾದ ಸೃಷ್ಟಿಯಾದ ಬೆನ್ನಿಗೇ ಕೇರಳದಲ್ಲಿ ಮತ್ತೊಂದು ನಕಲಿ ಮತದಾನ ಕೃತ್ಯ ಬೆಳಕಿಗೆ ಬಂದಿದೆ.

ಅರನ್ಮುಳ ಕ್ಷೇತ್ರದಲ್ಲಿ ಐದು ವರ್ಷಗಳ ಹಿಂದೆ ಮೃತಪಟ್ಟ ಮಹಿಳೆಯೋರ್ವರ ಹೆಸರಲ್ಲಿ ಆಕೆಯ ಸೊಸೆ ಮತಚಲಾಯಿಸಿದ್ದು, ಈ ಘಟನೆ ಬೆಳಕಿಗೆ ಬರುತ್ತಲೇ ಇಬ್ಬರು ಮತಗಟ್ಟೆ ಅಧಿಕಾರಿಗಳು ಹಾಗೂ ಬಿಎಲ್‌ಒಗಳನ್ನು ಅಮಾನತುಗೊಳಿಸಲಾಗಿದೆ.

ಪಟ್ಟಿಯಲ್ಲಿ ಕ್ರಮಸಂಖ್ಯೆ ಬದಲಾಗಿದ್ದು, ಹೀಗಾಗಿ ತಪ್ಪಾಗಿ ಮತ ಬದಲಾವಣೆಯಾಗಿದೆ ಎಂದು ಕುಟುಂಬ ಸಮಜಾಯಿಷಿ ನೀಡಿದ್ದಾರೆ, ಈ ಬಗ್ಗೆ ಮತದಾನ ರದ್ದುಪಡಿಸಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಲ್ಲಿನ ಜಿಲ್ಲಾಧಿಕಾರಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!