October 15, 2026
Thursday, October 15, 2026
spot_img

ಪ್ರಧಾನಿ ಮೋದಿಗೆ ಮತ್ತೊಂದು ಜಾಗತಿಕ ಗೌರವ: ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪ್ರದಾನ ಮಾಡಿದ ನಾರ್ವೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಾರ್ವೆ ದೇಶದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಗ್ರಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್’ ಗೌರವವನ್ನು ನೀಡಿ ಗೌರವಿಸಲಾಗಿದೆ.

ಪ್ರಧಾನಿ ಮೋದಿಗೆ ಒಲಿದ 32ನೇ ಗೌರವ

ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿ ಅವರಿಗೆ ಒಲಿದ 32ನೇ ಗೌರವವಾಗಿದೆ. ನಾರ್ವೆ ದೇಶವು ವಿಶ್ವದ ಜಾಗತಿಕ ನಾಯಕರಿಗೆ ನೀಡುವ ಅತ್ಯಂತ ಪ್ರತಿಷ್ಠಿತ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ ‘ಗ್ರಾಂಡ್ ಕ್ರಾಸ್ ಆಫ್ ದಿ ರಾಯಲ್ ನಾರ್ವೇಜಿಯನ್ ಆರ್ಡರ್’.

ಭಾರತ ಮತ್ತು ನಾರ್ವೆ ನಡುವಿನ ಬಾಂಧವ್ಯ

ಭಾರತ ಮತ್ತು ನಾರ್ವೆ ನಡುವಿನ ಉತ್ತಮ ಬಾಂಧವ್ಯ, ರಾಜತಾಂತ್ರಿಕ ಸಂಬಂಧ, ಜಾಗತಿಕ ಶಾಂತಿಗಾಗಿ ಪ್ರಧಾನಿ ಮೋದಿ ನೀಡಿದ ಅಪಾರ ಕೊಡುಗೆಗಳಿಗೆ ಗೌರವವಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಸ್ವೀಡನ್ ದೇಶದಿಂದಲ್ಲೂ ಪ್ರಶಸ್ತಿ

ಭಾನುವಾರವಷ್ಟೇ ಪ್ರಧಾನಿ ಮೋದಿಯವರಿಗೆ ಸ್ವೀಡನ್ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ‘ರಾಯಲ್ ಆರ್ಡರ್ ಆಫ್ ದಿ ಪೋಲಾರ್ ಸ್ಟಾರ್’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Must Read